ಜೆಇಇ ಮೈನ್ಸ್ ಫಲಿತಾಂಶ: ಅಬ್ಸಲ್ಯೂಟ್‌ ಅಕಾಡೆಮಿ ವಿದ್ಯಾರ್ಥಿ ಧನ್ವಿತ್ ವಿ ಉತ್ತಮ ಸಾಧನೆ

0

ಪುತ್ತೂರು: ಪ್ರಸಕ್ತ ಶೈಕ್ಷಣಿಕ ಸಾಲಿನ ಜೆಇಇ ಮೈನ್ಸ್ 2023 ಫಲಿತಾಂಶ ಪ್ರಕಟವಾಗಿದ್ದು ಇಲ್ಲಿನ ಅಬ್ಸಲ್ಯೂಟ್‌ ಲರ್ನಿಂಗ್‌ ಅಕಾಡೆಮಿಯ ವಿದ್ಯಾರ್ಥಿ ಧನ್ವಿತ್ ವಿ 17005ನೇ ರ್‍ಯಾಂಕ್ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಜೆಇಇ ಪರೀಕ್ಷೆಯು ಇಂಜಿನಿಯರಿಂಗ್ ಪ್ರವೇಶ ವಿಭಾಗದಲ್ಲಿ ರಾಷ್ಟ್ರ ಮಟ್ಟದ ಪರೀಕ್ಷೆಯಾಗಿದ್ದು ಸುಮಾರು 9.5 ಲಕ್ಷದಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಐಐಟಿ, ಎನ್‌ಐಟಿಯಂತಹ ಪ್ರತಿಷ್ಠಿತ ಸರಕಾರಿ ವಿದ್ಯಾಲಯಗಳ ಪ್ರವೇಶಗಳಿಗಾಗಿ ಪ್ರತೀ ವರ್ಷಎರಡು ಹಂತದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.ಈ ಹಿಂದಿನ ವರ್ಷದಂತೆ ಈ ಬಾರಿಯೂ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ತೋರಿರುವುದು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟದ ಕೈಗನ್ನಡಿಯಾಗಿದೆ ಎಂದು ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಶರತ್‌ ಎನ್‌ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here