ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾವರ್ಧಂತಿ ಉತ್ಸವ-ಜಾತ್ರೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಣೆ, ನೂತನ ಪಲ್ಲಕ್ಕಿ ಸಮರ್ಪಣೆ

0

ಪುತ್ತೂರು:ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ, ಜಾತ್ರೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಣೆ ಮತ್ತು ದೇವಳಕ್ಕೆ ನೂತನ ಪಲ್ಲಕ್ಕಿ ಆಗಮನವು ಎ.29ರಂದು ನೆರವೇರಿತು.


ಕಾರ್ಕಳದಲ್ಲಿ ನಿರ್ಮಾಣಗೊಂಡ ಆಗಮಿಸಿದ ಪಲ್ಲಕ್ಕಿಯನ್ನು ಪರ್ಲಡ್ಕ ಬೈಪಾಸ್ ಬಳಿ ಸ್ವಾಗತಿಸಲಾಯಿತು. ಬಳಿಕ ವಿವಿಧ ಸಂಘ ಸಂಸ್ಥೆಗಳ ಸಹಕಾರೊಂದಿಗೆ ವಿವಿಧ ಭಾಗಗಳ ಭಕ್ತರಿಂದ ದೇವಸ್ಥಾನಕ್ಕೆ ಸಮರ್ಪಣೆಗೊಂಡ ಹೊರೆಕಾಣಿಕೆ ತುಂಬಿದ ವಾಹನಗಳ ಜೊತೆಗೆ ದೇವಸ್ಥಾನಕ್ಕೆ ಆಗಮಿಸಿತು. ಬೆಟ್ಟಂಪಾಡಿ ಮಣಿಕಂಠ ಸಿಂಗಾರಿ ಮೇಳ, ಬಂಗಾರಡ್ಕ ಶ್ರೀರಾಮ ಭಜನಾ ಮಂಡಳಿ ಹಾಗೂ ದೊಡ್ಡಡ್ಕ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ಪುಟಾಣಿಗಳ ಕುಣಿತ ಭಜನೆಯು ಮೆರಣಿಗೆಯಲ್ಲಿ ಮೆರುಗು ನೀಡಿತ್ತು. ದೇವಸ್ಥಾನಕ್ಕೆ ಆಗಮಿಸಿದ ಹೊರೆಕಾಣಿಕೆ ಹಾಗೂ ನೂತನ ಪಲ್ಲಕ್ಕಿಯನ್ನು ಅಡಳಿತ ಮಂಡಳಿ ಹಾಗೂ ಅರ್ಚಕ ವೃಂದದವರು ಸ್ವಾಗತಿಸಿದರು. ಬಳಿಕ ಪಲ್ಲಕಿಯ ಸಮರ್ಪಣೆಯು ನೆರವೇರಿತು. ಬಳಿಕ ಭಕ್ತಾದಿಗಳಿಗೆ ಉಪಹಾರ ನೆರವೇರಿತು.


ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಪ್ರತಿಷ್ಠಾ ವರ್ಧಂತಿ ಉತ್ಸವದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಪಂಚವಿಂಶತಿ ಕಲಶ ಪೂಜೆ, ಕಲಶಾಭಿಷೇಕ, ಲೋಕ ಕಲ್ಯಾಣಕ್ಕಾಗಿ ದೇವರಿಗೆ ಸೀಯಾಳಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ರಂಗಪೂಜೆ ಹಾಗೂ ದೈವಗಳಿಗೆ ತಂಬಿಲ ನೆರವೇರಿತು.


ನಗರ ಸಭಾ ಸದಸ್ಯೆ ದೀಕ್ಷಾ ಪೈ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ, ಸದಸ್ಯರಾದ ಮಹಾಲಿಂಗ ನಾಯ್ಕ ಮಚ್ಚಿಮಲೆ, ವಿಶ್ವನಾಥ ಕುಲಾಲ್ ಮಚ್ಚಿಮಲೆ, ಚಂದಪ್ಪ ಪೂಜಾರಿ ಕುಂಜೂರು, ಜಿ.ಟಿ ನವೀನ ಕುಮಾರ್ ಗೆನಸಿನಕುಮೇರ್, ಉಮಾವತಿ ಪುರಂದರ ರೈ ಗೆಣಸಿನಕುಮೇರು, ಲೀಲಾವತಿ ನಾರಾಯಣ ಗೌಡ ಕುಂಜೂರು, ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here