ಕಡಬ ಜ್ಞಾನಸುಧಾ ಮೊಂಟೆಸ್ಸರಿ ಶಿಕ್ಷಣ ಸಂಸ್ಥೆಗೆ ಶೇ.100 ಫಲಿತಾಂಶ

0

ಕಡಬ: ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಅಧೀನದಲ್ಲಿರುವ ಭಾರತ್ ಸೇವಕ್ ಸಮಾಜ್‌ನ ಆಶ್ರಯದಲ್ಲಿ ಕಡಬದ ಶ್ರೀ ಗಣೇಶ್ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಜ್ಞಾನ ಸುಧಾ ಮೊಂಟೆಸ್ಸರಿ ಶಿಕ್ಷಣ ಸಂಸ್ಥೆಯಿಂದ ಡಿ.ಎಂ.ಎಡ್ ಶಿಕ್ಷಕಿಯರ ತರಬೇತಿ ಪರೀಕ್ಷೆಗೆ ಹಾಜರಾದ ಎಲ್ಲಾ 8 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಗೆ ಶೇ.100ತೇರ್ಗಡೆ ಫಲಿತಾಂಶ ಲಭಿಸಿದೆ.

ಆಶಾಲತಾ, ಅಕ್ಷತಾ, ತುಳಸಿ, ಶಿಲ್ಪ, ಸುಷ್ಮಾ, ಭವ್ಯ, ಅನಿತಾ, ನಯನ ಅವರು ವಿಶಿಷ್ಟ ಶ್ರೇಣಿಯನ್ನು ಪಡೆದಿರುತ್ತಾರೆ. ಇವರು ಈಶ ವಿದ್ಯಾಲಯ ಪುತ್ತೂರು ಇವರ ಮೂಲಕ ಪರೀಕ್ಷೆಗೆ ಹಾಜರಾಗಿರುತ್ತಾರೆ.2023-24ನೇ ಸಾಲಿನ ದಾಖಲಾತಿ ಆರಂಭಗೊಂಡಿದ್ದು ಆಸಕ್ತರು ಕೂಡಲೇ ಸಂಸ್ಥೆಯ ದೂರವಾಣಿ ಸಂಖ್ಯೆಯನ್ನು 8150954435 ಸಂಪರ್ಕಿಸಬಹುದೆಂದು ಸಂಚಾಲಕರಾದ ಬಿ.ಎಲ್ ಜನಾರ್ದನರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here