ಪುತ್ತೂರು : ಇತಿಹಾಸ ಪ್ರಸಿದ್ದ ಕಾರಣಿಕ ಶ್ರೀ ಮಾರಿಯಮ್ಮ ದೇವಸ್ಥಾನ ಬಪ್ಪಳಿಗೆ ಪುತ್ತೂರು ಇಲ್ಲಿ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಂಪ್ರತಿ ನಡೆಯುವ ವಾರ್ಷಿಕ ಮಾರಿಪೂಜೆಯು ಮೇ.1 ಸೋಮವಾರದಿಂದ ಮೇ.7 ಆದಿತ್ಯವಾರದ ವರೆಗೆ ನಡೆಯಲಿದೆ.
ಮೇ.1 ಸೋಮವಾರದಂದು ಬೆಳಿಗ್ಗೆ10:13ಕ್ಕೆ ಸರಿಯಾಗಿ ಗೊನೆಮುಹೂರ್ತ ನೆರವೇರಿ , ಮೇ.4 ರವರೆಗೆ ರಾತ್ರಿ 7:30ರಿಂದ ಭಜನೆ ಬಳಿಕ ನಂತರ ಮಹಾಪೂಜೆ ನಡೆಯಲಿದೆ.
ಮೇ.5 ಶುಕ್ರವಾರ ರಾತ್ರಿ ಗಂಟೆ 8 ಕ್ಕೆ ಶ್ರೀ ಅಲೇರ ಪಂಜುರ್ಲಿ ಮತ್ತು ಸತ್ಯಸಾರಮಣಿ ದೈವಗಳಿಗೆ ತಂಬಿಲ ಸೇವೆ ನಂತರ ಪ್ರಸಾದ ವಿತರಣೆ ನಡೆಯಲಿದೆ.
ಮೇ.6 ಶನಿವಾರದಂದು ಬೆಳಿಗ್ಗೆ ಅಮ್ಮನವರಿಗೆ ಪ್ರತಿಷ್ಠಾ ವರ್ಧಂತಿ ಪೂಜೆ , ರಾತ್ರಿ ಗಂಟೆ 7:30ಕ್ಕೆ ಅಮ್ಮನವರಿಗೆ ಮಹಾಪೂಜೆ ನಂತರ ದೈವಗಳ ಗಡುಸವಾರಿ ಕಾಲೋನಿ ಸಂಚಾರ ರಾತ್ರಿ ಗಂಟೆ 12:00ಕ್ಕೆ ಅಗ್ನಿಸೇವೆ ನಂತರ ಅಮ್ಮನವರ ಬಂಡಾರ ತೆಗೆದು ಬಯಲು ಮಂಟಪಕ್ಕೆ ತೆರಳಿ ಪ್ರತಿಷ್ಟಾಪನೆ ಮತ್ತು ಮಹಾಪೂಜೆಯು ನೆರವೇರಲಿದೆ.
ಮೇ.7 ಆದಿತ್ಯವಾರ ಮದ್ಯಾಹ್ನ 12:00ಕ್ಕೆ ಮಹಾಪೂಜೆ , ಅಮ್ಮನವರ ದರ್ಶನ ಚಾಮುಂಡಿ, ಕಲ್ಲುರ್ಟಿ, ಪಂಜುರ್ಲಿ,ಜಾಗದ ಗುಳಿಗ,ಸತ್ಯಸಾರಮಣಿ,ದುರ್ಗೆ, ಎಲ್ಲಮ್ಮ ದೈವಗಳ ದರ್ಶನ ಹರಕೆ ಸ್ವಿಕಾರ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂ.ಗಂ 6:30ಕ್ಕೆ: ಅಮ್ಮನವರ ಉತ್ಸವ ಮೂರ್ತಿ ಮರಳಿ ದೇವಸ್ಥಾನಕ್ಕೆ ತೆರಳಿ ಮಹಾಪೂಜೆ ನಡೆಯಲಿದ್ದು, ಆ ಪ್ರಯುಕ್ತ ಭಕ್ತಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.