ವಿಟ್ಲದಲ್ಲಿ ಬಿಜೆಪಿಯಿಂದ ರೋಡ್ ಶೋ, ಪ್ರಚಾರ ಸಭೆ

0

‘ವ್ಯಕ್ತಿ ಗೆದ್ದರೆ ಸಾಲದು ಪಕ್ಷ ಗೆಲ್ಲಬೇಕು – ಆಗ ನಮಗೆ ಮರ್ಯಾದಿ’- ಅಣ್ಣಾಮಲೈ

ಮಾತೃಶಕ್ತಿ ಎದ್ದುನಿಂತು ದುಷ್ಟ ಶಕ್ತಿಯನ್ನು ನಿಗ್ರಹಿಸಬೇಕು: ಮಠಂದೂರು

ಕಾರ್ಯಕರ್ತರ ಶ್ರಮದಿಂದ ಪಕ್ಷಕ್ಕೆ ಗೆಲುವಾಗಲಿದೆ: ಆಶಾ ತಿಮ್ಮಪ್ಪ ಗೌಡ

ವಿಟ್ಲ:‌ ಕರ್ನಾಟಕದ ಈ ಎಲೆಕ್ಷನ್ ಬಿಜೆಪಿಗೆ ಅತೀ ಮುಖ್ಯವಾದುದು‌. ದೇಶದೆಲ್ಲೆಡೆ ಬಿಜೆಪಿ ವಿಜಯ ಪತಾಕೆಯನ್ನು ಹಾರಿಸಲಿದೆ. ಪುತ್ತೂರಿನಲ್ಲಿ ಮತ್ತೊಮ್ಮೆ ಬಿಜೆಪಿ ಗೆದ್ದು ಬಂದು ತನ್ನ ಅದಿಪತ್ಯವನ್ನು ತೋರಿಸಬೇಕಿದೆ. ರೈತರ ಪರವಾಗಿ ಇರುವ ಬಿಜೆಪಿ ಸರಕಾರ ಸಾಮಾಜಿಕ ನ್ಯಾಯವನ್ನು ಕೊಡುವ ಕೆಲಸವನ್ನು ಮಾಡಿದೆ. ವ್ಯಕ್ತಿ ಗೆದ್ದರೆ ಸಾಲದು ಬಿಜೆಪಿ ಪಕ್ಷ ಗೆಲ್ಲಬೇಕು. ಬಿಜೆಪಿ ಗೆದ್ದರೆ ನಮಗೆ ಮರ್ಯಾದಿ. ಕಾಂಗ್ರೆಸ್ ಹಗಲು ಕನಸನ್ನು ಕಾಣಿತ್ತಿದ್ದಾರೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು.

ಅವರು ಎ.29ರಂದು ವಿಟ್ಲದಲ್ಲಿ ನಡೆದ ರೋಡ್ ಶೋ ಬಳಿಕ ನಡೆದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಭ್ರಷ್ಟಾಚಾರದಲ್ಲೇ ಆಡಳಿತ ನಡೆಸಿದ ಕಾಂಗ್ರೆಸ್ ನವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಬಿಜೆಪಿ ವಿಐಪಿ ಸಂಸ್ಕೃತಿ ತೆಗೆದು ಹಾಕಿ ಹೊಸ ಇತಿಹಾಸ ಬರೆದಿದೆ. ಬಿಜೆಪಿ ಸರಕಾರ ಕೋವಿಡ್ ಸಮಯದಲ್ಲಿ ದೇಶವನ್ನು ನಿರ್ವಹಿಸಿದ ರೀತಿ ಅತ್ಯದ್ಭುತವಾಗಿದ್ದು, ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಹಿತ ಎಲ್ಲಾ ಧರ್ಮದ ಜನರಿಗೆ ನೆಮ್ಮದಿಯ ಬದುಕು ಸಿಗಲಿದೆ. ಭಾರತದಲ್ಲಿ ಕಾಂಗ್ರೆಸ್ ಬೇಡ ಎಂಬ ನಿರ್ಧಾರಕ್ಕೆ ಜನ ಬಂದಾಗಿದೆ. ಎಲ್ಲರಿಗೂ ಬಿಜೆಪಿ ಪಕ್ಷ ಗೆಲ್ಲಬೇಕು ಎನ್ನುವ ಭಾವನೆಯಿದೆ. ಕಾಂಗ್ರೆಸ್ ರಿವರ್ಸ್ ಗೇರ್ ನಲ್ಲಿ ಹೋಗುತ್ತಿದ್ದು, ಬಿಜೆಪಿ ಡಬಲ್ ಇಂಜಿನ್ ನಲ್ಲಿ ಹೋಗುತ್ತಿದೆ.
ಮಹಿಳಾ ಶಕ್ತಿ ಅತೀ ಮುಖ್ಯ. ಇಲ್ಲಿ ಈಗೋಗೆ ಜಾಗವಿಲ್ಲ. ಎಲ್ಲವರೂ ಒಳ್ಳೆಯವರು. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ತನ್ನ ಇರುವಿಕೆಯನ್ನು ತೋರ್ಪಡಿಸುತ್ತಿದೆ. ಬಿಜೆಪಿ ಮಾಡಿದ ಕೆಲಸವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಾಯಕರುಗಳು ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಎಲ್ಲರೂ ಆಶಾ ತಿಮ್ಮಪ್ಪರವರಿಗೆ ಮತನೀಡಿ ಅವರನ್ನು ಗೆಲ್ಲಿಸಿ ಎಂದರು.

ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಮಾತನಾಡಿ ಮಾತೃಶಕ್ತಿ ಎದ್ದು ನಿಂತು ದುಷ್ಟ ಶಕ್ತಿಯನ್ನು ನಿಗ್ರಹಿಸಬೇಕು.ಯಾರ ಬಗ್ಗೆಯೂ ಹೆದರಿಕೆ ಬೇಡ. ಬೂತ್ ನಿಂದ ಹಿಡಿದು ಕೇಂದ್ರದವರೆಗೆ ಬಿಜೆಪಿ‌ ಇರುವುದು. ನಾನು ಕಳೆದ ಐದು ವರ್ಷದಲ್ಲಿ ನವ ಪುತ್ತೂರನ್ನು ಮಾಡಿದ್ದೇನೆ. ಹಲವಾರು ವರುಷ ಆಡಳಿತ ಮಾಡಿದ ಬಿಜೆಪಿ ಹಲವಾರು ಜನಪರ ಯೋಜನೆಯನ್ನು ಜಾರಿಗೆ ತಂದಿದೆ. ಜನರ ಸ್ವಾಬಿಮಾನಿ ಬದುಕಿಗೆ ಪೂರಕವಾಗಿ ಇರುವ ಸರಕಾರ ಬಿಜೆಪಿ. ಬಿಜೆಪಿ ದೇಶದ ಆರ್ಥಿಕತೆಗೆ ಭದ್ರತೆ ನೀಡುವ ಕೆಲಸ ಮಾಡಿದೆ. ರೈತರ ಏಳಿಗೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಶ್ವಿಯಾಗಿದೆ. ನಾವು ಪ್ರತಿಯೋರ್ವನ ಬದುಕಿಗೆ ಗ್ಯಾರಂಟಿ ಕೊಟ್ಟಿದ್ದೇವೆ. ನಮ್ಮ ವಿಧಾನಸಭಾ ಕ್ಷೇತ್ರ ಶಾಂತಿ ಸುವ್ಯವಸ್ಥೆಯಿಂದ ಇದೆ ಇದಕ್ಕೆ ಕಾರಣ ನಮ್ಮ ಡಬ್ಬಲ್ ಇಂಜಿನ್ ಸರಕಾರ. ಕರ್ನಾಟಕನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡಬೇಕಾಗಿದೆ. ಹಿಂದುತ್ವದ ನೆಲೆಯಲ್ಲಿ ನಾವು ಮತ್ತೊಮ್ಮೆ ವಿಜಯಪತಾಕೆಯನ್ನು ಹಾರಿಸಬೇಕಿದೆ.

ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮಾತನಾಡಿ ಕಾರ್ಯಕರ್ತರ ಶ್ರಮದಿಂದ ಪಕ್ಷಕ್ಕೆ ಗೆಲುವಾಗಲಿದೆ. ನನಗೆ ವಯಸ್ಸಾಗಿದೆ ಎಂದು ನನ್ನ ಬಗ್ಗೆ ಕಾಂಗ್ರೆಸಿಗರು ಅಪಪ್ರಚಾರ ನಡೆಸುತ್ತಿದ್ದಾರೆ. ಮನಸ್ಸಿಗೆ ಯಾವಾಗಲೂ ವಯಸ್ಸು ಆಗುವುದಿಲ್ಲ. ಅಪಪ್ರಚಾರಗಳಿಗೆ ಕಿವಿ ಕೊಡದೆ ಪಕ್ಷ ಮುಖ್ಯ ಎಂದು ಕೆಲಸ ನಿರ್ವಹಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಮೂಲೆ ಮೂಲೆಗೆ ತಲುಪಿಸುವ ಕಾರ್ಯ ಮಾಡಿದ್ದು, ಅದನ್ನು ಮತವಾಗಿ ಪರಿವರ್ತಿಸಬೇಕು. ಇಲ್ಲಿ ವ್ಯಕ್ತಿ ನಗಣ್ಯ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ರಾಷ್ಟೀಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ಬಿಂದು ಸುರೇಶ್, ರೈತ ಮೋರ್ಚಾ ಕಾರ್ಯದರ್ಶಿ ರೇಣುಕಾ ಪ್ರಸಾದ್, ಸಹಜ್ ರೈ ಬಳಜ್ಜ, ನವೀನ್ ಪಡ್ನೂರು, ಸುನಿಲ್ ದಡ್ಡು, ಕಿಶೋರ್ ಬೊಟ್ಯಾಡಿ, ಮೀನಾಕ್ಷಿ ಶಾಂತಿಗೋಡು, ಕೆ.ಟಿ. ಶೈಲಜಾ ಭಟ್, ಯಶಸ್ವಿನಿ ಶಾಸ್ತ್ರೀ, ಹರಿಪ್ರಸಾದ್ ಯಾದವ್ ಮೊದಲಾವರು ಉಪಸ್ಥಿತರಿದ್ದರು.

ವಿಟ್ಲ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ ಸ್ವಾಗತಿಸಿದರು. ರವೀಶ್ ಶಿವಾಜಿ ನಗರ ವಂದಿಸಿದರು. ಮೋಹನದಾಸ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here