ಪುತ್ತೂರು: ಪುತ್ತೂರು ವಿಧಾನಸಭಾ ಕ್ಚೇತ್ರ ಹೈವೋಲ್ಟೇಜ್ ಕ್ಷೇತ್ರ. ವಿಧಾನಸಭಾ ಚುನಾವಣೆಯಲ್ಕಿ ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲೂ 130 ರಲ್ಲಿ ಒಂದು ಸೀಟು ಕಡಿಮೆ ಆಗುವುದಿಲ್ಲ, ಪುತ್ತೂರು ಕೂಡಾ ಸೇರಿದೆ ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಬೆಂಗಳೂರು ಉತ್ತರದ ಸಂಸದ ಡಿ.ವಿ.ಸದಾನಂದ ಗೌಡ ಅವರು ಹೇಳಿದರು.
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಮತಯಾಚನೆಗೆ ಪುತ್ತೂರಿಗೆ ಆಗಮಿಸಿದ ಡಿ.ವಿ , ಪುತ್ತೂರು ಬಿಜೆಪಿ ಚುನಾವಣೆ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿಯ ಭದ್ರಕೋಟೆಯಲ್ಲಿ ಬಿರುಕುಂಟು ಮಾಡುವವರೆ ಬಲಿಯಾಗುತ್ತಾರೆ. ಪುತ್ತೂರಿನ ಜನಸಾಮಾನ್ಯರಿಗೂ ನೆಮ್ಮದಿಯಿಂದ ಓಡಾಟ ಮಾಡಲು ಕಾರಣವಾದದ್ದು ಬಿಜೆಪಿ. ಹಿಂದಿನ ಗೂಂಡಾ ರಾಜ್ಯಕ್ಕೆ ಇತಿಶ್ರೀ ಹಾಕಿದ್ದು ಬಿಜೆಪಿ ಆದರೆ ಇವತ್ತು ಮತ್ತೆ ಕಾಂಗ್ರೆಸ್ ಅದೇ ಚಿಂತನೆಯಲ್ಲಿದೆ. ಆದರೆ ಕಾಂಗ್ರೆಸ್ ನೆನಪಿನಲ್ಲಿಡಬೇಕು. ಬಿಜೆಪಿ ಶಸ್ತ್ರಾಸ್ತ್ರ ಕೆಳಗಿಡಲಿಲ್ಲ. ನಮಗೆ ಪ್ರಾಯ ಆಗಿರಬಹುದು ವಿಷಕ್ಕೆ ಪ್ರಾಯ ಆಗಿಲ್ಲ.ಗೂಂಡಾ ರಾಜಕಾರಣಕ್ಕೆ ತಕ್ಕ ಉತ್ತರ ಬಿಜೆಪಿ ನೀಡಲಿದೆ. ಸಂಜೀವ ಮಠಂದೂರು ಗೆಲುವಿಗೆ ಕಾರಣವಾದ 22 ಸಾವಿರ ಮತಗಳಿಗೆ ಸೇರಿಸಿ ಬಿಜೆಪಿ ಗೆಲುವಾಗಲಿದೆ. ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಿಗೆ ಅಭೂತಪೂರ್ವವಾಗಿ ಗೆದ್ದು ಬರಲಿದ್ದಾರೆ. ಎಂದರು.
ನಾನು ಬಿಜೆಪಿ ಯಲ್ಲಿ ಇದ್ದವರಿಗೆ ಆಪ್ತ ಮಿತ್ರ. ಪಕ್ಷ ಬಿಟ್ಟು ಹೋದವರಿಗೆ ಆಪ್ತಮಿತ್ರನಲ್ಲ :
ಬಿಜೆಪಿಯಲ್ಲಿ ಯಾರೆಲ್ಲ ಇರುತ್ತಾರೋ ಅವರಿಗೆ ಆಪ್ತ ಮಿತ್ರ. ಪಕ್ಷ ಬಿಟ್ಟು ಹೋದವರಿಗೆ ನಾನು ಆಪ್ತ ಮಿತ್ರನಲ್ಲ ಎಂದ ಡಿ ವಿ ಸದಾನಂದ ಗೌಡ ಅವರು ಬಿಜೆಪಿ ಪಕ್ಷದಲ್ಲಿದ್ದಾಗ ಮಿತ್ರ ಕಾಂಗ್ರೆಸ್ ಗೆ ಹೋದಾಗ ಶತ್ರು ಎಂದರು.
ಹಿಂದು ಶಬ್ದಕ್ಕೆ ಅರ್ಥ ಕೊಟ್ಟದ್ದು ನರೇಂದ್ರ ಮೋದಿ:
ಹಿಂದು ಎಂಬ ಶಬ್ದಕ್ಕೆ ವಿಶೇಷ ಅರ್ಥ ಕೊಟ್ಟದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿರುವ ಡಿವಿಎಸ್, ಪಕ್ಷೇತರ ಮತ್ತು ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆ. ಅವರ ಆಟ ನಡೆಯುವುದಿಲ್ಲ. ಹಣದ ಆಟವೂ ನಡೆಯುವುದಿಲ್ಲ ಎಂದು ಹೇಳಿದರು.
ಶಾಸಕ ಸಂಜೀವ ಮಠಂದೂರು, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮುಗೇರೋಡಿ ಬಾಲಕೃಷ್ಣ ರೈ, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ರೈ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಅಳ್ವ, ನಗರ ಮಂಡಲದ ಅದ್ಯಕ್ಷ ಪಿ ಜಿ ಜಗನ್ನಿವಾಸ ರಾವ್, ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಚಂದ್ರಶೇಖರ್ ರಾವ್ ಬಪ್ಪಳಿಗೆ ಉಪಸ್ಥಿತರಿದ್ದರು