ಸುಳ್ಯ ಕಾಂಗ್ರೆಸ್ ಆಂತರಿಕ ಗೊಂದಲ ಇತ್ಯರ್ಥ- ರಮಾನಾಥ ರೈ ನೇತೃತ್ವದಲ್ಲಿ ಮಾತುಕತೆ – ಪಕ್ಷದ ಹಿತಕ್ಕಾಗಿ ಜತೆಯಾಗಿ ಕೆಲಸ ಮಾಡಲು ಸೂಚನೆ

0

ಕಾಣಿಯೂರು : ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮತ್ತು ನಂತರದ ಪಕ್ಷದೊಳಗಿನ ಗೊಂದಲಗಳ ಬಗ್ಗೆ ಕೆಪಿಸಿಸಿ ಮತ್ತು ಎ ಐ ಸಿ ಸಿ ನಿರ್ದೇಶನದಂತೆ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಎ ಐ ಸಿ ಸಿ ಸದಸ್ಯ ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ಕೇದಾರ್ ನೇತೃತ್ವದಲ್ಲಿ ಮಾತುಕತೆ ನಡೆಸಿ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಬಂಟ್ವಾಳದಲ್ಲಿ ಮೇ.2 ರಂದು ರಮಾನಾಥ ರೈ ಅವರ ನಿವಾಸದಲ್ಲಿ ಸುಳ್ಯ ಮತ್ತು ಕಡಬ ಬ್ಲಾಕ್ ಅಧ್ಯಕ್ಷರು ಅಭ್ಯರ್ಥಿ ಕೃಷ್ಣಪ್ಪ ಮತ್ತು ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಹೆಚ್ ಎಂ ನಂದಕುಮಾರ್ ಹಾಗೂ ಸ್ವಾಭಿಮಾನಿ ಕಾಂಗ್ರೆಸ್ ಕಾರ್ಯಕರ್ತರ ಬಳಗದ ಪ್ರಮುಖರ ಜೊತೆಗೆ ಮಾತುಕತೆ ನಡೆಸಿ ಪಕ್ಷದ ಆಂತರಿಕ ಗೊಂದಲಗಳನ್ನು ಬದಿಗಿರಿಸಿ ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಜತೆಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಗೊಂದಲ ನಿವಾರಣೆ ಬಗ್ಗೆ ಸುಳ್ಯ ಮತ್ತು ಕಡಬ ಬ್ಲಾಕ್ ಜಂಟಿ ಪತ್ರಿಕಾಗೋಷ್ಠಿ ನಡೆಸುವಂತೆ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ, ಕಡಬ ಬ್ಲಾಕ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ, ಪ್ರವೀಣ್ ಕುಮಾರ್ ಕೇಡೆಂಜಿಗುತ್ತು, ಮಹೇಶ್ ಭಟ್ ಕರಿಕ್ಕಳ, ಗೋಕುಲ್ ದಾಸ್ ಸುಳ್ಯ, ಸತ್ಯಕುಮಾರ್ ಅಡಿಂಜ, ಉಷಾ ಅಂಚನ್, ಉಷಾ ಜೋಯ್,ಶಶಿಧರ್ ಎಂ ಜೆ ಭವಾನಿಶಂಕರ್ ಕಲ್ಮಡ್ಕ, ಸುಧೀರ್ ದೇವಾಡಿಗ, ಸತೀಶ್ ಶೆಟ್ಟಿ, ರವೀಂದ್ರ ರುದ್ರಪಾದ, ಪೈಜಲ್ ಕಡಬ, ಬಾಲಕೃಷ್ಣ ಮರೀಲ್, ಶೋಭಿತ್ ನಾಯರ್, ಶಿವರಾಮ ರೈ ಸುಬ್ರಮಣ್ಯ, ಗೋಪಾಲಕೃಷ್ಣ ಭಟ್, ಕಮಲಾಕ್ಷ ಕೊಲ್ಲಮೊಗರು, ಅಬೂಬಕ್ಕರ್ ಅರಫಾ, ಸಂದೇಶ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here