ಪುತ್ತೂರು: ರಾಷ್ಟ್ರಭಕ್ತ ಸಮಾಜದ ಕಾರ್ಯ ಮಾಡುತ್ತಿರುವ ಬಜರಂಗದಳವನ್ನು ನಿಷೇಧ ಮಾಡುತ್ತೇವೆಂದು ಹೊರಟಿರುವ ಕಾಂಗ್ರೆಸ್ ಹತಾಶ ಮನೋಭಾವದಿಂದ ಯಾವ ಮಟ್ಟಕ್ಕೆ ತಲುಪಿದೆ ಎಂದು ನಮಗೆ ತಿಳಿದಿದೆ. ನಮ್ಮ ಸಂಘಟನೆಯನ್ನು ಕಟ್ಟಿ ಹಾಕಲು ಕಾಂಗ್ರೆಸ್ ಪಕ್ಷ ಹೊರಟರೆ ಕಂಡಿತವಾಗಿಯೂ ನಾವು ರಕ್ಷಣೆ ಮಾಡಿದ ಗೋವುಗಳ ಶಾಪ ತಟ್ಟಲಿದೆ. ಕಾಂಗ್ರೆಸ್ ಪಕ್ಷ ನಿರ್ಣಾಮ ಆಗಲಿದೆ ಎಂದು ಬಜರಂಗಳದ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸಾವಿರಾರು ಸಹೋದರಿಯರ ಮಾನ ರಕ್ಷಣೆ ಮಾಡಿರುವುದು ಬಜರಂಗದಳ ಕಾರ್ಯಕರ್ತರು. ಇವತ್ತು ಮಹಿಳೆಯರಲ್ಲಿ ಬಜರಂಗದಳ ಬೇಕಾ ಬೇಡವಾ ಎಂದು ಪ್ರಶ್ನೆ ಮಾಡಿದರೆ ದೇಶ, ರಾಜ್ಯದ ತಾಯಂದಿರು ಬಜರಂಗದಳ ಬೇಕೆಂದು ಘಂಟಾಘೋಷವಾಗಿ ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವ್ಯಕ್ತಿಗಳೂ ಮನೆ ಮನೆಗೆ ಹೋದಾಗ ಮಹಿಳೆಯರು ಪೊರಕೆ ಹಿಡಿದು ಮನೆಗೆ ನುಗ್ಗಬೇಡಿ ಎಂದು ಹೇಳಬಹುದು. ಮಂದೆ ನಡೆಯುವ ಎಚ್ಚರಿಕೆಯನ್ನು ನಾವು ಹೇಳುತ್ತಿದ್ದೇವೆ. ಕೇವಲ ಗೋ ರಕ್ಷಣೆ ಮಾತ್ರವಲ್ಲದೆ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಪೀಡಿತ ವ್ಯಕ್ತಿಗಳಿಗೆ ಆಹಾರದ ಪೂರೈಕೆ ಮಾಡುವ ಉದಾಹರಣೆ ಅದೇಷ್ಟೋ ಇದೆ. ಇಷ್ಟೆಲ್ಲ ಉತ್ತಮ ಸಮಾಜ ಕಾರ್ಯದ ನಡುವೆ ಕಾಂಗ್ರೆಸ್ ಇವತ್ತು ಬೆಂಕಿಗೆ ಕೈ ಹಾಕಿದೆ. ದೊಡ್ಡದಾಗಿರುವ ವಾನರಸೇನೆ ಕಾಂಗ್ರೆಸ್ಗೆ ಸರಿಯಾದ ಉತ್ತರ ನೀಡಲಿದೆ. ಕಾಂಗ್ರೆಸ್ಗೆ ತಾಕತ್ತಿದ್ದರೆ ಬಜರಂಗದಳ ನಿಷೇಧಿಸುತ್ತೇವೆ ಎಂದು ಇನ್ನೊಮ್ಮೆ ಹೇಳಲಿ. ಆಗ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಲು ಈ ದೇಶ ಜನರು ಸಿದ್ದರಿದ್ದಾರೆ. ಪ್ರವೀಣ್ ನೆಟ್ಟಾರು, ಶಿವಮೊಗ್ಗದ ಹರ್ಷ, ಶರತ್ ಮಡಿವಾಳ ಹತ್ಯೆಯ ಸಂದರ್ಭದಲ್ಲಿ ಜಿಹಾದಿಗಳು ಸರಿಯಾದ ಉತ್ತರ ಕೊಟ್ಟು ಸಮಾಜದ ಜೊತೆ ನಾವಿದ್ದೇವೆ ಎಂದು ಎದೆಗೆ ಎದೆಕೊಟ್ಟು ನಿರ್ಣಯದ ಸಂಘಟನೆ ಬಜರಂಗದಳ. ದೇಶದ್ರೋಹ ಮಾಡುವ ಸಂಘಟನೆ ಬಜರಂಗದಳವಲ್ಲ. ರಾಷ್ಟ್ರ, ಧರ್ಮದ ಕಾರ್ಯ ಮಾಡುತ್ತಿದೆ ಎಂದು ಕಾಂಗ್ರೆಸ್ ಬಜರಂಗದಳವನ್ನು ನಿಷೇಧಿಸಲು ಹೊರಟಿದೆ. ನಿಮಗೆ ತಾಕತ್ತಿದ್ದರೆ ಬಜರಂಗದಳ ನಿಷೇದ ಮಾಡಿಸಿ. ಇದನ್ನು ಬಹಿರಂಗವಾಗಿ ವೇದಿಕೆಯಲ್ಲಿ ಹೇಳಬೇಕು. ನಾವು ಆಗ ನಿಮ್ಮ ಭಾಷಣ ಮಾಡಲು ಮತ್ತು ಕಾರ್ಯಕ್ರಮ ಮಾಡಲು ಬಿಡುವುದಿಲ್ಲ. ಹಿಂದು ವಿರೋಧಿಯಾಗಿರುವ ಕಾಂಗ್ರೆಸ್ ಸರಕಾರ ನಿರ್ಣಾಮ ಮಾಡಿ ನಮ್ಮ ಪರವಾಗಿರುವ ಬಿಜೆಪಿ ಸರಕಾರವನ್ನು ಈ ಭಾರಿ ರಾಜ್ಯದಲ್ಲಿ ಚುನಾಯಿಸುವಂತೆ ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಪುತ್ತೂರು ನಗರ ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ, ಜಿಲ್ಲಾ ಸಹಕಾರ್ಯವಾಹ ಶ್ರೀಧರ್ ತೆಂಕಿಲ, ಬಜರಂಗದಳ ನಗರ ಸಂಯೋಜಕ ಹರೀಶ್ ಕುಮಾರ್ ದೋಳ್ಪಾಡಿ ಉಪಸ್ಥಿತರಿದ್ದರು.