ನೆಲ್ಯಾಡಿ: ಕೆಟ್ಟು ನಿಂತು ದುರಸ್ತಿಯಲ್ಲಿದ್ದ ಲಾರಿಗೆ ಟಿಪ್ಪರ್ ಡಿಕ್ಕಿಯಾಗಿ ಟಿಪ್ಪರ್ ಚಾಲಕ ಹಾಗೂ ಕ್ಲೀನರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಗ್ರಾಮದ ಸಣ್ಣಂಪ್ಪಾಡಿ ಎಂಬಲ್ಲಿ ಮೇ 1ರಂದು ರಾತ್ರಿ ನಡೆದಿದೆ.
ಟಿಪ್ಪರ್ ಚಾಲಕ ಲೋಹಿತ್ ಹಾಗೂ ಕ್ಲೀನರ್ ಪ್ರವೀಣ್ ಗಾಯಗೊಂಡವರಾಗಿದ್ದಾರೆ. ಇವರು ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿಗೆ ಟಿಪ್ಪರ್ ಲಾರಿ(ಕೆಎ 70 3132)ಯಲ್ಲಿ ಬರುತ್ತಿದ್ದ ವೇಳೆ ಗೋಳಿತ್ತೊಟ್ಟು ಗ್ರಾಮದ ಸಣ್ಣಂಪಾಡಿ ಎಂಬಲ್ಲಿ ಕೆಟ್ಟುನಿಂತು ದುರಸ್ತಿಯಲ್ಲಿದ್ದ ಎಡಮಂಗಲ ಕರಿಂಬಿಲ ನಿವಾಸಿ ಮಹಮ್ಮದ್ ಜುಬೈರ್ ಎಂಬವರ ಮಾಲಕತ್ವದ (ಕೆಎ19 ಸಿ 5148)ಲಾರಿಯ ಹಿಂಭಾಗಕ್ಕೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಟಿಪ್ಪರ್ ಚಾಲಕ ಲೋಹಿತ್ ಹಾಗೂ ಕ್ಲೀನರ್ ಪ್ರವೀಣ್ ಎಂಬವರು ಗಾಯಗೊಂಡಿದ್ದು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಾಗಿದ್ದಾರೆ. ಟಿಪ್ಪರ್ ಚಾಲಕ ಲೋಹಿತ್ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಭಾಗಕ್ಕೆ ಟಿಪ್ಪರ್ ಚಲಾಯಿಸಿದ ಪರಿಣಾಮ ಲಾರಿಗೆ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ಎರಡೂ ವಾಹನಗಳೂ ಜಖಂಗೊಂಡಿವೆ. ಲಾರಿ ಮಾಲಕ ಹಾಗೂ ಚಾಲಕರಾದ ಮಹಮ್ಮದ್ ಜುಬೈರ್ರವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಠಾಣೆಯಲ್ಲಿ ಕಲಂ:279,337ಐಪಿಸಿಯಂತೆ ಪ್ರಕರಣ ದಾಖಲಾಗಿದೆ.