ಉಪ್ಪಿನಂಗಡಿ: ಉಪ್ಪಿನಂಗಡಿ ಕಸಬ ಗ್ರಾಮಕ್ಕೆ ಸಂಬಂಧಪಟ್ಟ ಬಾರ್ಲದಲ್ಲಿ ಜೀರ್ಣೋದ್ಧಾರಗೊಂಡು ಪುನರ್ ನಿರ್ಮಾಣಗೊಂಡಿರುವ ಗ್ರಾಮ ದೈವ ಶಿರಾಡಿ ಹಾಗೂ ಪರಿವಾರ ದೈವಗಳ ಧರ್ಮಚಾವಡಿ ಮತ್ತು ದೈವಸ್ಥಾನದಲ್ಲಿ ಶ್ರೀ ಶಿರಾಡಿ, ಶ್ರೀ ರುದ್ರಚಾಮುಂಡಿ, ಶ್ರೀ ಪಂಜುರ್ಲಿ, ಶ್ರೀ ಕಲ್ಕುಡ, ಶ್ರೀ ಕಲ್ಲುರ್ಟಿ, ಶ್ರೀ ಗುಳಿಗ ದೈವಗಳ ಪುನ: ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಮೇ 6 ಹಾಗೂ 7ರಂದು ಗೋಪಾಲಕೃಷ್ಣ ತೋಳ್ಪಾಡಿತ್ತಾಯರ ನೇತೃತ್ವದಲ್ಲಿ ಶ್ರೀವತ್ಸ ಕೆದಿಲಾಯ ಶಿಬರ ಇವರ ದಿವ್ಯಹಸ್ತದಿಂದ ನಡೆಯಲಿದೆ ಎಂದು ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.
ಮೇ 6ರಂದು ಬೆಳಿಗ್ಗೆ 8ರಿಂದ ನವಗ್ರಹ ಹೋಮ, ಭೂವರಾಹ ಹೋಮ, ಬೆಳಿಗ್ಗೆ 10ರಿಂದ ಹೊರೆಕಾಣಿಕೆ ಸಮರ್ಪಣೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 7ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಆಚಾರ್‍ಯಾದಿ ಋತ್ವಿಗ್ಪರಣ, ಪ್ರಾಸಾದ ಪರಿಗ್ರಹ, ಪ್ರಾಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತುಬಲಿ, ವಾಸ್ತುಹೋಮ, ವಾಸ್ತು ಪೂಜಾಬಲಿ, ಬಿಂಬಶುದ್ಧಿ, ಅಧಿವಾಸ ಪ್ರಕ್ರಿಯೆಗಳು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಮೇ 7ರಂದು ಬೆಳಿಗ್ಗೆ 7ಕ್ಕೆ ಶ್ರೀ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಕಲಶ ಪ್ರತಿಷ್ಠೆ ನಡೆದು 9.57ಕ್ಕೆ ನಡೆಯುವ ಮಿಥುನ ಲಗ್ನದಲ್ಲಿ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ನಿತ್ಯ ನೈಮಿತ್ತಿಕ ವಿಷಯ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.