ಪುತ್ತೂರು: ಬಪ್ಪಳಿಗೆ ರಾಗಿಕುಮೇರಿ ಮಾರಿಯಮ್ಮ ದೇವಾಲಯದ ಪ್ರತಿಷ್ಠಾ ವರ್ಧಂತಿ ಮತ್ತು ವಾರ್ಷಿಕ ಮಾರಿಪೂಜಾ ಕಾರ್ಯಕ್ರಮ ಮೇ.7ರಂದು ಸಂಪನ್ನಗೊಂಡಿತು. ತಂತ್ರಿ ಬ್ರಹ್ಮಶ್ರೀ ವೇ.ಮೂ.ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆರವರು ವಿವಿಧ ಧಾರ್ಮಿಕ, ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಮೇ.7ರ ಮಧ್ಯಾಹ್ನ ಮಹಾಪೂಜೆ, ಅಮ್ಮನವರ ದರ್ಶನ, ಚಾಮುಂಡಿ, ಕಲ್ಲುರ್ಟಿ, ಪಂಜುರ್ಲಿ, ಗುಳಿಗ, ಸತ್ಯಸಾರಮಣಿ, ದುರ್ಗೆ ಹಾಗೂ ಎಲ್ಲಮ್ಮ ದೈವಗಳ ದರ್ಶನ, ಹರಕೆ ಸ್ವೀಕಾರ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆದು, ಸಂಜೆ ಅಮ್ಮನವರ ಉತ್ಸವ ಮೂರ್ತಿ ಮರಳಿ ದೇವಸ್ಥಾನಕ್ಕೆ ತೆರಳಿ ಮಹಾಪೂಜೆಯೊಂದಿಗೆ ದೇವರ ವಾರ್ಷಿಕೋತ್ಸವ ಸಂಪನ್ನಗೊಂಡಿತು.
ಗೌರವಾಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್, ಅಧ್ಯಕ್ಷ ಬೊಮ್ಮಣ್ಣ ನೆಲ್ಲಿಗುಂಡಿ, ಪ್ರ.ಕಾ.ಮೋಹನ್ ನೆಲ್ಲಿಗುಂಡಿ, ಉಪಾಧ್ಯಕ್ಷ ಸಂಜೀವ ಮೇಸ್ತ್ರಿ ಬಪ್ಪಳಿಗೆ, ಜತೆ ಕಾರ್ಯದರ್ಶಿ ಭಾಸ್ಕರ ನೆಲ್ಲಿಗುಂಡಿ, ಜತೆ ಕೋಶಾಧಿಕಾರಿ ಲೋಲಾಕ್ಷ ಬಪ್ಪಳಿಗೆ, ಸಂಚಾಲಕ ಲೋಕೇಶ್ ದರ್ಖಾಸು, ಗಣೇಶ್ ಮತ್ತು ಸತೀಶ್ ಬಪ್ಪಳಿಗೆ, ಸಂಜೀವ ನೆಲ್ಲಿಗುಂಡಿ, ವಿಕ್ರಮ್ ನೆಲ್ಲಿಗುಂಡಿ, ಸುರೇಶ್ ಮೆಲ್ಕಾರ್ , ಜಗದೀಶ್ ದರ್ಖಾಸು ಮತ್ತು ವಿನೀತ್ ನೆಲ್ಲಿಗುಂಡಿ ಹಾಗೂ ಭಕ್ತರು ಹಾಜರಿದ್ದರು.