ಪುತ್ತೂರು: ಶ್ರೀಕೃಷ್ಣ ಬಡವರ ಆಶಾಕಿರಣ ಸೇವಾ ಸಂಸ್ಥೆಯಿಂದ ಅನಾರೋಗ್ಯ ಪೀಡಿತರಿಗೆ ಆರ್ಥಿಕನೆರವು

0

ಪುತ್ತೂರು: ಯುವಜನ ಇಲಾಖೆ ಪ್ರಶಸ್ತಿ ಪುರಸ್ಕೃತಗೊಂಡಿರುವ ಪುತ್ತೂರು ಸಿಟಿಗುಡ್ಡೆಯ ಶ್ರೀ ಕೃಷ್ಣ ಯುವಕ ಮಂಡಲದಿಂದ ಶ್ರೀಕೃಷ್ಣ ಬಡವರ ಆಶಾಕಿರಣ ಸೇವಾ ಸಂಸ್ಥೆಯ 67ನೇ ಯೋಜನೆಯಾಗಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕೋಟೆಕಾರ್ ಗ್ರಾಮದ ಮಾಡೂರು ನಿವಾಸಿಯಾದ ಸತೀಶ್ ಅವರಿಗೆ ಆರ್ಥಿಕ ನೆರವು ನೀಡಲಾಯಿತು.


ಹೃದಯಾಘತಕ್ಕೀಡಾಗಿ ಸತೀಶ್ ಅವರು ನೊಂದಿರುವ ಹಿನ್ನೆಲೆಯಲ್ಲಿ ಅವರ ದಾನಿಗಳ ಸಹಾಯದಿಂದ ಸಂಗ್ರಹವಾದ ರೂ.15ಸಾವಿರವನ್ನು ನೀಡಲಾಯಿತು. ಈ ಸಂದರ್ಭ ದೀಕ್ಷಾ ಮಂಗಳೂರು ಅವರು ಬಡ ಕುಟುಂಬಕ್ಕೆ ಸಹಾಯ ಮಾಡಿದ್ದರು. ಯುವಕ ಮಂಡಲದ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here