ಶಾಂತಿನಗರ ಸರಕಾರಿ ಪ್ರೌಢಶಾಲೆಗೆ ಶೇ.92.68 ಫಲಿತಾಂಶ

0

ಪುತ್ತೂರು: ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ. 92.68 ಫಲಿತಾಂಶ ಲಭಿಸಿದೆ.

ಪರೀಕ್ಷೆಗೆ ಹಾಜರಾದ 41 ವಿದ್ಯಾರ್ಥಿಗಳಲ್ಲಿ 38 ಮಂದಿ ಉತ್ತೀರ್ಣರಾಗಿದ್ದು, ವಿಶಿಷ್ಟ ಶ್ರೇಣಿಯಲ್ಲಿ 9, ಪ್ರಥಮ ಶ್ರೇಣಿಯಲ್ಲಿ 15, ದ್ವಿತೀಯ ಶ್ರೇಣಿಯಲ್ಲಿ 13 ಮತ್ತು ತೃತೀಯ ಶ್ರೇಣಿಯಲ್ಲಿ ಓರ್ವರು ತೇರ್ಗಡೆಯಾಗಿದ್ದಾರೆ. ಮೋಕ್ಷಿತಾ ಪಿ. ಅವರು 574 ಅಂಕ‌ ಪಡೆದು ಶಾಲೆಗೆ ಅಗ್ರಸ್ಥಾನಿಯಾಗಿದ್ದು, ಕೀರ್ತನ್ ಡಿ.ಕೆ. ಮತ್ತು ಹರ್ಷಿತ್ ತಲಾ 565 ಅಂಕ‌ ಪಡೆದು ದ್ವಿತೀಯ ಸ್ಥಾನ‌‌ ಗಳಿಸಿದ್ದಾರೆ. ಹರ್ಷಿತ್ ಪಿ 561 ಅಂಕ ಪಡೆದು ತೃತೀಯ ಸ್ಥಾನ‌ ಪಡೆದಿದ್ದಾರೆ.

LEAVE A REPLY

Please enter your comment!
Please enter your name here