ಪುತ್ತೂರು :2022-2023ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗ ಕೊಂಬೆಟ್ಟು ಶೇಕಡಾ 84.4 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 256 ವಿದ್ಯಾರ್ಥಿಗಳಲ್ಲಿ 21 ಮಂದಿ ಡಿಸ್ಟಿಂಕ್ಷನ್, 119 ಮಂದಿ ಪ್ರಥಮ ಶ್ರೇಣಿ, 71 ಮಂದಿ ದ್ವಿತೀಯ ಶ್ರೇಣಿ ಸೇರಿದಂತೆ ಒಟ್ಟು 216 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 84.4 ಫಲಿತಾಂಶ ಪಡೆದುಕೊಂಡಿದೆ. ಶ್ರೇಯಾ ಎಸ್-613, ಕೆ. ಈಷಾನಿ-610, ಭವಿತಾ-609, ಸಾಯಿಸಹನಾ-593, ಶ್ರಾವ್ಯ ಹೆಚ್.ಬಿ-593, ಅಶ್ವಿತಾ. ಎ-592, ಮೋಕ್ಷಿತಾ-588, ಪ್ರತಿಜ್ಞಾ-582, ನಿಶ್ಮಿತಾ. ಆರ್-574, ಜೀವನ್. ಎನ್-569, ಸಂಜನ್ ಕುಮಾರ್-569, ಮಧುಶ್ರೀ-564, ವಿದಾತ್ತ ರಾಮ ಐತಾಳ್-562, ತೇಜಸ್ ಜೆ.ಕೆ-550, ಕನ್ನಿಕಾ ಗೌರಿ-547, ಸುಶಾಂತ್. ಕೆ-543, ಗಗನ್ ಶೆಟ್ಟಿ-540, ಸಹನಾ-538, ರಾಕೇಶ್-538, ಯಶಸ್ವಿ ಬಿ.ಕೆ-535, ಕೃತೇಶ್ ಜಾನ್ಸನ್-532 ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಉಪಪ್ರಾಂಶುಪಾಲರಾದ ವಸಂತ ಮೂಲ್ಯ ಇವರು ತಿಳಿಸಿದ್ದಾರೆ.