ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಾಖಲಾತಿ ಪ್ರಾರಂಭ

0

ಪುತ್ತೂರಿನ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಬಡ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬೆಳಕನ್ನು ಒದಗಿಸುವ ಹಾಗೂ ಆ ಮೂಲಕ ಈ ಪರಿಸರದ ಸಾಮಾಜಿಕ, ಆರ್ಥಿಕ ಪ್ರಗತಿಯಲ್ಲಿ ಯುವಜನತೆಯನ್ನು ಬಳಸಿಕೊಳ್ಳುವ ಉದಾತ್ತ ಧೈಯದೊಂದಿಗೆ ಕರ್ನಾಟಕ ಸರ್ಕಾರವು ಕಾಲೇಜು ಶಿಕ್ಷಣ ಇಲಾಖೆಯಡಿಯಲ್ಲಿ 2007ರಲ್ಲಿ ಪುತ್ತೂರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಸ್ಥಾಪಿಸಿತು. ಆರಂಭದಲ್ಲಿ ನೆಲ್ಲಿಕಟ್ಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡ ಕಾಲೇಜು ಪ್ರಸ್ತುತ ಪುತ್ತೂರಿನಿಂದ 3.5ಕಿ.ಮೀ. ದೂರದ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬ ಹಚ್ಚ ಹಸಿರಿನ ಪ್ರಶಾಂತ ಪರಿಸರದಲ್ಲಿ ತನ್ನ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.

ಧ್ಯೇಯೋದ್ದೇಶಗಳು:

ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವುದು.

ವಿದ್ಯಾರ್ಥಿಗಳ ಜ್ಞಾನ, ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ವೈಜ್ಞಾನಿಕ ಮನೋಭಾವಗಳ ಬೆಳವಣಿಗೆಗೆ ಅವಕಾಶ ಕಲ್ಪಿಸುವುದು.

ವಿದ್ಯಾರ್ಥಿಗಳನ್ನು ಸಮಕಾಲೀನ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸುವುದು.

ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ, ದೇಶಭಕ್ತಿ, ಪ್ರಾಮಾಣಿಕತೆ, ಜಾತ್ಯಾತೀತತೆ, ಹಾಗೂ ಸೇವಾ ಮನೋಭಾವವನ್ನು ಉದ್ದೀಪನಗೊಳಿಸುವುದು.

ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ ಮತ್ತು ಸಾಮಾಜಿಕ ಪ್ರಜ್ಞೆ ಬೆಳೆಸುವುದು.

ಕಾಲೇಜಿನಲ್ಲಿ ಲಭ್ಯ ಅಧ್ಯಯನ ವಿಷಯಗಳು:
ಬಿ.ಎ. (ಮಾನವಿಕ ವಿಷಯದಲ್ಲಿ ಪದವಿ ಶಿಕ್ಷಣ)

ಹೆಚ್.ಇ.ಪಿ. (ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ), 2.ಹೆಚ್.ಇ.ಎಸ್ (ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ)
ಬಿ. ಕಾಂ. (ವಾಣಿಜ್ಯ ಅಧ್ಯಯನ ವಿಷಯದಲ್ಲಿ ಪದವಿ ಶಿಕ್ಷಣ)

ಮಂಗಳೂರು ವಿಶ್ವವಿದ್ಯಾಲಯ ನಿಗದಿ ಪಡಿಸಿದ ಕಡ್ಡಾಯ ವಿಷಯಗಳು
ಬಿ. ಬಿ.ಎ.(ನಿರ್ವಹಣಾಶಾಸ್ತ್ರ ಅಧ್ಯಯನ ವಿಷಯದಲ್ಲಿ ಪದವಿ ಶಿಕ್ಷಣ)

ಮಂಗಳೂರು ವಿಶ್ವವಿದ್ಯಾಲಯ ನಿಗದಿ ಪಡಿಸಿದ ಕಡ್ಡಾಯ ವಿಷಯಗಳು ಅಧ್ಯಯನಕ್ಕೆ ಲಭ್ಯವಿರುವ ಭಾಷೆಗಳು
(ಮೊದಲ ಎರಡು ವರ್ಷಗಳು ಮಾತ್ರ)
ಇಂಗ್ಲೀಷ್, ಕನ್ನಡ ಮತ್ತು ಹಿಂದಿ

ಪದವಿ ಶಿಕ್ಷಣದ ಶೈಕ್ಷಣಿಕ ನಿಯಮಗಳು :
ಮೂರು/ ನಾಲ್ಕು ವರ್ಷಗಳ ಪದವಿಗೆ ಒಟ್ಟು ಆರು / ಎಂಟು ಸೆಮಿಸ್ಟರ್ ಶಿಕ್ಷಣ ಪೂರೈಸಬೇಕು.
ಪ್ರತಿ ಸೆಮಿಸ್ಟರ್‌ನ ಕೊನೆಯಲ್ಲಿ ವಿಶ್ವವಿದ್ಯಾಲಯದಿಂದ ಪರೀಕ್ಷೆಗಳು ನಡೆಸಲ್ಪಡುತ್ತವೆ.
ಪ್ರತಿ ಸೆಮಿಸ್ಟರ್‌ನ ಕೊನೆಯಲ್ಲಿ 2 ಆಂತರಿಕ ಪರೀಕ್ಷೆಗಳನ್ನು ನಡೆಸಿ ಮತ್ತು ಎನ್‌ಇಪಿ ಪ್ರಕಾರ ಸ್ಟೋರ್/ಎನ್‌ಎಸ್‌ಎಸ್/ರೆಡ್ ಕ್ರೋಸ್/ಫೈನ್‌ಆರ್ ಹಾಗೂ ಇತರ ಚಟುವಟಿಕೆಗಳ ಆಧಾರದಲ್ಲಿ ಆಂತರಿಕ ಅಂಕಗಳನ್ನು ನೀಡಲಾಗುತ್ತದೆ.

ಎಲ್ಲಾ ವಿಷಯಗಳ ನಿಗದಿತ ತರಗತಿಗಳಿಗೆ ಕನಿಷ್ಠ 75% ಹಾಜರಾತಿ ಹೊಂದಿರಲೇಬೇಕು. ಇಂಥವರು ಮಾತ್ರ ವಿಶ್ವವಿದ್ಯಾಲಯಗಳ ಪರೀಕ್ಷೆಗೆ ಬರೆಯಲು ಅರ್ಹತೆ ಪಡೆಯುತ್ತಾರೆ.

ಕಾಲೇಜನಲ್ಲಿ ಲಭ್ಯವಿರುವ ಸವಲತ್ತುಗಳು :
ಅನುಭವಿ ಹಾಗೂ ಶಿಕ್ಷಣದಲ್ಲಿ ಅಪಾರ ಆಸಕ್ತಿ ಇರುವ ಬೋಧಕವರ್ಗ,
ಸುವ್ಯವಸ್ಥಿತ ವಾಚನಾಲಯವನ್ನು ಒಳಗೊಂಡ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ಕೇಂದ್ರ,
ಉಪಯುಕ್ತ ಸವಲತ್ತುಗಳುಳ್ಳ ಕ್ರೀಡಾ ವಿಭಾಗ.
ನಗರದಿಂದ ಕಾಲೇಜಿಗೆ ಪೂರ್ವಾಹ್ನ ಹಾಗೂ ಅಪರಾಹ್ನ ಸರಕಾರಿ ಬಸ್ಸಿನ ವ್ಯವಸ್ಥೆ.
ಸರ್ಕಾರದಿಂದ ಹಾಗೂ ಅರೆಸರ್ಕಾರಿ ಸಂಸ್ಥೆಗಳಿಂದ ಹಲವಾರು ವಿದ್ಯಾರ್ಥಿವೇತನಗಳು.
ಸಹಪಠ್ಯ ಹಾಗೂ ಪತ್ಯೇತರ ಚಟುವಟಿಕೆಗಳಿಗಾಗಿ ಕ್ರೀಡಾ ಸಂಘ,ರೆಡ್ ಕ್ರಾಸ್, ಎನ್‌ಎಸ್‌ಎಸ್. ರೋವರ್‌ರೇಂಜರ್ ಮತ್ತು ಲಲಿತಕಲಾ ಸಂಘ.
ವಿದ್ಯಾರ್ಥಿಗಳ ಸುಪ್ತಪ್ರತಿಭಾ ವಿಕಸನಕ್ಕಾಗಿ ಜ್ಞಾನದೀಪ್ತಿ ವಾಲ್ ಮ್ಯಾಗಝಿನ್, ವಾಣಿಜ್ಯ ಸಂಘ, ಮಾನವಿಕ ಸಂಘ.
ಕರ್ನಾಟಕ LMS (ಕಲಿಕಾ ನಿರ್ವಹಣಾ ವ್ಯವಸ್ಥೆ) ಆಧಾರಿತ ಡಿಜಿಟಲ್ ಕಲಿಕೆಯು ವಿಷಯ ಸಂವಹನ, ಲಭ್ಯತೆ ಮತ್ತು ಮೌಲ್ಯಮಾಪನಗಳಲ್ಲಿ ಪರಿವರ್ತಕ ಬದಲಾವಣೆಗಳನ್ನು ತರುವ ಮೂಲಕ ಬೋಧನೆ-ಕಲಿಕೆಗಳಲ್ಲಿ ಕ್ರಾಂತಿ ಮೂಡಿಸುವ ಸಮಗ್ರ ವೇದಿಕೆಯಾಗಿದೆ. ಇದು ಅಧ್ಯಾಪಕರನ್ನು ಸಶಕ್ತಗೊಳಿಸುವ ವಿದ್ಯಾರ್ಥಿಗಳನ್ನು ಸಮೃದ್ಧಗೊಳಿಸುವ ಮತ್ತು ಡಿಜಿಟಲ್ ಅಂತರವನ್ನು ಅಳಿಸಿ ಹಾಕುವ ಅತ್ಯುತ್ತಮ ವ್ಯವಸ್ಥೆಯಾಗಿದೆ. ಇದು ಎಲ್ಲರಿಗೂ ಅಪೇಕ್ಷಿತ ಸಮಯ ಮತ್ತು ಸ್ಥಳಗಳಲ್ಲಿ ಜ್ಞಾನಾರ್ಜನೆಯ ಶಕ್ತಿಯನ್ನು ನೀಡುತ್ತದೆ.

ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಲಭ್ಯ ವಿದ್ಯಾರ್ಥಿವೇತನಗಳು ಹಾಗೂ ಇತರ ಸವಲತ್ತುಗಳು:

ಕರ್ನಾಟಕ ಸರ್ಕಾರದ ಆದೇಶಾನುಸಾರ ಬೋಧನಾ ಶುಲ್ಕಗಳಲ್ಲಿ ವಿದ್ಯಾರ್ಥಿನಿಯರಿಗೆ ಸಂಪೂರ್ಣ ವಿನಾಯಿತಿ,

ಪರಿಶಿಷ್ಟಜಾತಿ / ಪಂಗಡದ ವಿದ್ಯಾರ್ಥಿವೇತನ,

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ,

ಭಾರತ ಸರ್ಕಾರದ ಹಾಗೂ ಕರ್ನಾಟಕ ಸರ್ಕಾರದ ವತಿಯಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ,

ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು,

ಕೆಎಸ್‌ಆರ್‌ಟಿಸಿ ವತಿಯಿಂದ ರಿಯಾಯಿತಿ ದರದಲ್ಲಿ ಬಸ್ಸುಪಾಸು

ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಸಂಚಿ ಹೊನ್ನಮ್ಮ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿವೇತನಗಳು.

SJ ಜಿಂದಾಲ್, ಸಂತೂರು, ಇನೋಸಿಸ್, ಟಾಟಾ ಫೌಂಡೇಶನ್ ಮುಂತಾದ ಖಾಸಗಿ, ವಿದ್ಯಾರ್ಥಿವೇತನಗಳು

ಕಾರ್ಮಿಕ ಇಲಾಖೆಯ ವಿದ್ಯಾರ್ಥಿವೇತನಗಳು

ಬೀಡಿ ಕಟ್ಟುವ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ,
ಪಠ್ಯೇತರ / ಸಹಪಠ್ಯ ಚಟುವುಕೆಯ ಅವಕಾಶಗಳು: ವಿಶ್ವವಿದ್ಯಾಲಯದ ನಿಯಮಗಳಾನುಸಾರ ಪದವಿ ತರಗತಿಗಳ ವಿದ್ಯಾರ್ಥಿಗಳು ಯಾವುದಾದರೂ ಒಂದು ಸಹಪಠ್ಯ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕಾಗಿದೆ ಹಾಗೂ ಅಂತಹ ಚಟುವಟಿಕೆಗೆ ಅಂಕ ನೀಡಲಾಗುತ್ತದೆ.
ನಮ್ಮ ಕಾಲೇಜಿನಲ್ಲಿ:
*ಸಾಂಸ್ಕೃತಿಕ ಸಂಘ
*ಕ್ರೀಡಾ ಸಂಘ
*ರೇಂಜರ್ ರೋವರ್ ಘಟಕ
*ರೆಡ್ ಕ್ರಾಸ್ ಘಟಕ
*ಎನ್.ಎಸ್.ಎಸ್. ಘಟಕ ಈ ಐದು ಸಹಪಠ್ಯ / ಪತ್ಯೇತರ ಅವಕಾಶಗಳಿದ್ದು ಪ್ರಥಮ / ದ್ವಿತೀಯ ವ ರ್ಷದ ವಿದ್ಯಾರ್ಥಿಗಳು ಈ ಪೈಕಿ ಯಾವುದಾದರೂ ಒಂದರಲ್ಲಿ ಸೇರುವುದು ಕಡ್ಡಾಯವಾಗಿದೆ. (ಕಡ್ಡಾಯ ವಿಷಯಗಳನ್ನು ಹೊರತುಪಡಿಸಿ)

ಸುವ್ಯವಸ್ಥಿತ ಕಂಪ್ಯೂಟರ್ ಲ್ಯಾಬ್
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
ಪ್ರಾAಶುಪಾಲರು-9480530778
ಪ್ರೊ. ಹರೀಶ್ ನಾಯಕ್- 9448911944
ಪ್ರೊ. ಸುಜಾತ ಪಿ.ಎಸ್.-9480345342
ಪ್ರೊ. ಅಂಬೋಸ್.ಎA.ಸಿ.-9739787828

ನ್ಯಾಕ್‌ನಿಂದ ಅತ್ಯುತ್ತಮ ಗ್ರೇಡ್

ನ್ಯಾಕ್(National Assessment & Accreditation Council) ಸಂಸ್ಥೆಯವರು ಕಳೆದ ಜನವರಿಯಲ್ಲಿ ಕಾಲೇಜಿಗೆ ಭೇಟಿ ನೀಡಿ ದಾಖಲೆಗಳನ್ನೆಲ್ಲ ಕೂಲಂಕಷವಾಗಿ ಪರಿಶೀಲಸಿ 2.68/4 ಅಂಕಗಳೊAದಿಗೆ ‘ ಆ +’ ಗ್ರೇಡ್ ನೀಡಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪರಿಸರದ ಕಾಲೇಜುಯೊಂದಕ್ಕೆ ಈ ಬಗೆಯ ಅತ್ಯುತ್ತಮ ಗ್ರೇಡ್ ದೊರಕಿರುವುದು ಇದೇ ಮೊದಲು.

2023-24ನೇ ಶೈಕ್ಷಣಿಕ ವರ್ಷದ ದಾಖಲಾತಿ ಆರಂಭ
ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಗಳು ಆರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳೂ ಪೋಷಕರೂ ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಪಡೆಯ ಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- ಪ್ರಾಂಶುಪಾಲರು:-9480530778,ಪ್ರೊ. ಹರೀಶ್ ನಾಯಕ್:-9448911944, ಪ್ರೊ.ಸುಜಾತ ಪಿ.ಎಸ್:-9480345342, ಪ್ರೊ.ಅಂಬ್ರೋಸ್.ಎಂ.ಸಿ:-9739787828

LEAVE A REPLY

Please enter your comment!
Please enter your name here