ಪುತ್ತೂರು : ಚುನಾವಣೆಯಲ್ಲಿ ಅನಿವಾರ್ಯವಾಗಿ ಸ್ಪರ್ಧಿಸುವ ಪರಿಸ್ಥಿತಿ ನಿರ್ಮಾಣವಾಯಿತು.
ಈ ಮೂಲಕ ಧನಾತ್ಮಕ ಸಂದೇಶ ದೇಶಕ್ಕೆ ರವಾನೆಯಾಗಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.
ದರ್ಬೆಯಿಂದ ಮಹಾಲಿಂಗೇಶ್ವರ ನ ನಡೆ ವರೆಗೆ ನಡೆದ ಸೇವಾ ಸಮರ್ಪಣಾ ಕಾಲ್ನಡಿಗೆ ಜಾಥಾದ ಬಳಿಕ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಪುತ್ತಿಲ
ನೂರಾರು ಸವಾಲುಗಳ ಮಧ್ಯೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೆವು. ಚುನಾವಣೆ ಸಂದರ್ಭದಲ್ಲಿ ನಡೆದ ವಾಮಮಾರ್ಗದ ಪ್ರಯತ್ನದ ಪರಿಣಾಮ ಸೋಲಾಯಿತು.
ಆರೆಸ್ಸೆಸ್ ಹಿರಿಯರ ಯೋಚನೆ, ತ್ಯಾಗ ಬಲಿದಾನಗಳನ್ನು ಮರೆತು ಈ ಚುನಾವಣೆಯಲ್ಲಿ ಸ್ವಾಭಿಮಾನದ ವಿರುದ್ಧ ಕೆಲಸ ನಡೆಯಿತು ಎಂದು ಹೇಳಿದರು.
ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವುಕರಾದ ಪುತ್ತಿಲ
ದೌರ್ಜನ್ಯಕ್ಕೊಳಗಾದ ಕಾರ್ಯಕರ್ತರ ಕಣ್ಣೀರಿನ ಆರ್ತನಾದಕ್ಕೆ ಉತ್ತರ ಕೊಡುವವರು ಯಾರೆಂದು ಸಂಕಲ್ಪ ಮಾಡಬೇಕಿದೆ ಎಂದರು.
ಹೊಸ ಇತಿಹಾಸವನ್ನು ಜೊತೆ ಜೊತೆಗೆ ನಿರ್ಮಾಣ ಮಾಡಬೇಕಾದ ಅವಶ್ಯಕತೆಯಿದೆ. ನೀವು ಇಟ್ಟಿರುವ ವಿಶ್ವಾಸಕ್ಕೆ ನಾನು ಎಂದಿಗೂ ಚಿರ ಋಣಿ ಎಂದ ಅವರು ಇಂದು ಪುತ್ತಿಲ ಪರಿವಾರದ ಮೂಲಕ ಹೊಸ ಭಾಷ್ಯವನ್ನು ಬರೆದಿದ್ದೇವೆ.
ನಮ್ಮ ಪ್ರಬುದ್ಧತೆಯನ್ನು ಸಮಾಜಕ್ಕೆ ತೋರಿಸಬೇಕಾದ ಅವಶ್ಯಕತೆ ಇದೆ. ಸಾಮಾಜಿಕ ಜವಾಬ್ದಾರಿಯ ಜೊತೆಗೆ ನಮ್ಮೊಂದಿಗೆ ನಿಲ್ಲುತ್ತೀರಿ ಎನ್ನುವ ವಿಶ್ವಾಸವಿದೆ. ನಿಮ್ಮ ಕಷ್ಟ, ನೋವುಗಳಿಗೆ ಸ್ಪಂದಿಸುವ ಕೆಲಸ ಮುಂದಿನ ದಿನಗಳಲ್ಲಿ ಮಾಡುತ್ತೇನೆ. ಚುನಾವಣೆಯ ಕೊನೆಯ ಕ್ಷಣದವರೆಗೆ ಬದುಕುಳಿಯುವ ವಿಶ್ವಾಸ ನನಗಿರಲಿಲ್ಲ. ಕಾರ್ಯಕರ್ತರ ವಿಶ್ವಾಸ, ಆಶೀರ್ವಾದ ಜೀವಂತವಾಗಿ ನಿಲ್ಲಿಸಿದೆ. ನನ್ನಲ್ಲಿ ಜಾತಿಯಿಲ್ಲ, ಹಿಂದುತ್ವ ಮಾತ್ರ.
ಕೊನೆಯ ಉಸಿರಿರುವವರೆಗೂ ಧರ್ಮದ ಕೆಲಸವನ್ನು ಮಾಡುತ್ತೇನೆ. ನನ್ನ ಕಣ್ಣೀರಿನ ಪ್ರತಿ ಹನಿಗೆ ಮಹಾಲಿಂಗೇಶ್ವರ ದೇವರು ಉತ್ತರ ನೀಡುತ್ತಾರೆ ಎಂದು ಮತ್ತೊಮ್ಮೆ ಭಾವುಕರಾದರು.