ಪುತ್ತೂರುನ 3 ಕೇಂದ್ರಗಳು ಸೇರಿ ಜಿಲ್ಲೆಯ 28 ಕೇಂದ್ರಗಳಲ್ಲಿ ಸಿಇಟಿ ಮುಕ್ತಾಯ

0

ಪುತ್ತೂರು:ವೃತ್ತಿಪರ ಕೋರ್ಸ್ಗಳಿಗೆ ಸೇರಬಯಸುವವರಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಸುಸೂತ್ರವಾಗಿ ಮುಕ್ತಾಯಗೊಂಡಿದೆ. ಪುತ್ತೂರಿನಲ್ಲಿ ಮೂರು ಕೇಂದ್ರ ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಒಟ್ಟು 28 ಕೇಂದ್ರಗಳಲ್ಲಿ ಮೇ 20, 21ರಂದು ಪರೀಕ್ಷೆ ನಡೆದಿದೆ.
ಮೇ21ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ನಡೆದಿದೆ. ಭೌತಶಾಸ್ತ ಪರೀಕ್ಷೆಗೆ ಜಿಲ್ಲೆಯಲ್ಲಿ 1887 ಮಂದಿ, ರಸಾಯನ ಶಾಸ್ತ್ರ ವಿಷಯ ಪರೀಕ್ಷೆಗೆ ಜಿಲ್ಲೆಯಲ್ಲಿ 1892 ಮಂದಿ ಗೈರು ಹಾಜರಾಗಿದ್ದಾರೆ. ರಸಾಯನ ಶಾಸ್ತ್ರ ಪರೀಕ್ಷೆಗೆ ಪುತ್ತೂರು ವಿವೇಕಾನಂದ ಪ.ಪೂ.ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 80 ಮಂದಿ ಗೈರು ಹಾಜರಾಗಿದ್ದಾರೆ. ಪರೀಕ್ಷೆಗೆ ಹಾಜರಾಗಬೇಕಿದ್ದ 858 ವಿದ್ಯಾರ್ಥಿಗಳಲ್ಲಿ 778 ಮಂದಿ ಹಾಜರಾಗಿದ್ದಾರೆ. ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಾಗಿದ್ದ 857 ವಿದ್ಯಾರ್ಥಿಗಳಲ್ಲಿ 780 ಮಂದಿ ಹಾಜರಾಗಿದ್ದು 77 ಮಂದಿ ಗೈರು ಹಾಜರಾಗಿದ್ದಾರೆ. ಸಂತ ಫಿಲೋಮಿನಾ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಬೇಕಿದ್ದ 912 ವಿದ್ಯಾರ್ಥಿಗಳಲ್ಲಿ 857 ಮಂದಿ ಹಾಜರಾಗಿದ್ದು 55 ಮಂದಿ ಗೈರು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆಯಬೇಕಾಗಿದ್ದ ಒಟ್ಟು 16206 ವಿದ್ಯಾರ್ಥಿಗಳಲ್ಲಿ 14314 ಮಂದಿ ಪರೀಕ್ಷೆ ಬರೆದಿದ್ದು 1892 ಮಂದಿ ಗೈರು ಹಾಜರಾಗಿದ್ದಾರೆ.

ಭೌತಶಾಸ್ತ್ರ ಪರೀಕ್ಷೆಗೆ ಪುತ್ತೂರು ವಿವೇಕಾನಂದ ಪ.ಪೂ.ಕಾಲೇಜು ಕೇಂದ್ರದಲ್ಲಿ 858 ವಿದ್ಯಾರ್ಥಿಗಳ ಪೈಕಿ 770 ಮಂದಿ ಪರೀಕ್ಷೆ ಬರೆದಿದ್ದು 79 ಮಂದಿ ಗೈರು ಹಾಜರಾಗಿದ್ದಾರೆ. ಕೊಂಬೆಟ್ಟು ಸ.ಪ.ಪೂ.ಕಾಲೇಜು ಕೇಂದ್ರದಲ್ಲಿ 857 ವಿದ್ಯಾರ್ಥಿಗಳಲ್ಲಿ 784 ಮಂದಿ ಪರೀಕ್ಷೆ ಬರೆದಿದ್ದು 73 ಮಂದಿ ಗೈರು ಹಾಜರಾಗಿದ್ದಾರೆ. ಸಂತ ಫಿಲೋಮಿನಾ ಪ.ಪೂ.ಕಾಲೇಜು ಕೇಂದ್ರದಲ್ಲಿ 912 ವಿದ್ಯಾರ್ಥಿಗಳ ಪೈಕಿ 858 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 54 ಮಂದಿ ಗೈರು ಹಾಜರಾಗಿದ್ದಾರೆ. ಮೇ 20ರಂದು ನಡೆದ ವಿಜ್ಞಾನ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ 10,936 ವಿದ್ಯಾರ್ಥಿಗಳು ಹಾಗೂ ಗಣಿತ ವಿಷಯದ ಪರೀಕ್ಷೆಯಲ್ಲಿ 13998 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

LEAVE A REPLY

Please enter your comment!
Please enter your name here