ಪುತ್ತೂರು: ಅಮೃತ ಎಸ್.ಎಮ್.ಜಿ. ಅವರು ಬರೆದ ಚೊಚ್ಚಲ ಕೃತಿಯಾದ ಮಾಯದ ವಟುವಿನ ‘ನಾ ಕಂಡ ತೋಕೂರು ಶ್ರೀ ಸುಬ್ರಹ್ಮಣ್ಯ ಚರಿತ್ರೆ’ ಎಂಬ ಸ್ಥಳ ಪುರಾಣ ಪುಸ್ತಕ ಬಿಡುಗಡೆ ಕಾರ್ಯಕ್ರಮ ತೋಕೂರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮೇ.17ರಂದು ನಡೆಯಿತು. ಲೇಖಕರ ತಾಯಿ ನೀಲಾವತಿ ಎಸ್. ಮೋನಪ್ಪ ಗೌಡ, ವೇದಮೂರ್ತಿ ಗೋಪಾಲಕೃಷ್ಣ ತಂತ್ರಿ ಶಿಬರೂರು, ಅರ್ಚಕ ಶರತ್ ಕುಮಾರ್ ಹಾಗೂ ಪುತ್ರಿ, ಮತ್ತು ಸರಕಾರಿ ಪದವಿಪೂರ್ವ ಕಾಲೇಜು ಚೇಳ್ಳಾರು ಪ್ರಾಂಶುಪಾಲ (ಲೇಖಕರು) ಡಾ. ಜ್ಯೋತಿ ಚೇಳ್ಳಾರು ಮತ್ತು ಪುತ್ರ, ಸರಕಾರಿ ಪದವಿಪೂರ್ವ ಕಾಲೇಜು ಹಳೆಯಂಗಡಿ ಉಪನ್ಯಾಸಕ ಶುಭಲಕ್ಷ್ಮಿ ಮತ್ತು ಪತಿ ಹಾಗೂ ಮಕ್ಕಳು, ತೋಕೂರು ದೇವಸ್ಥಾನದ ಸಮಿತಿ ಮಾಜಿ ಸದಸ್ಯ ಸುಂದರ ಸಾಲ್ಯಾನ್‌ರವರ ಪತ್ನಿ ವನಜ, ಮೋಹಿನಿ ತೋಕೂರು, ಸುಶೀಲ ತೋಕೂರು, ಪ್ರೇಮಲತಾ ತೋಕೂರು ಮತ್ತು ಪುತ್ರಿ, ಮಾನ್ಯ ಇಂದಿರಾನಗರ, ಬಂಟ್ವಾಳ ಸರಕಾರಿ ಪದವಿಪೂರ್ವ ಕಾಲೇಜು ಉಪ- ಪ್ರಾಂಶುಪಾಲ ಅನಂತಪದ್ಮನಾಭ ಭಟ್ ಶಿಬರೂರು ಮತ್ತು ಪತ್ನಿ ಹಾಗೂ ಮಕ್ಕಳು ಸುಬ್ರಹ್ಮಣ್ಯ ಕೆ. ರಾವ್, ಛಾಯಾಚಿತ್ರಕಾರ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.
ಅಮೃತ ಎಸ್.ಎಮ್.ಜಿ. ಹಳೆಯಂಗಡಿ ಎಸ್. ಮೋನಪ್ಪ ಗೌಡ ಮತ್ತು ನೀಲಾವತಿರವರ ಪುತ್ರಿ. ಮೂಲತಃ, ಪುತ್ತೂರಿನ ಪಡುಮಲೆ ನಿವಾಸಿಯಾಗಿದ್ದಾರೆ. ಬಿ.ಎ, ಬಿ.ಇಡಿ. (ಸಮಾಜ ಮತ್ತು ಇಂಗ್ಲೀಷ್), ಎಂ.ಎ. (ಇತಿಹಾಸ) ಹಾಗೂ ಎಮ್.ಎಲ್.ಐ.ಎಸ್ಸಿ. (ಲೈಬ್ರೆರಿಸೈನ್ಸ್) ಮತ್ತು ಕಂಪ್ಯೂಟರ್ ವೃತ್ತಿ ಶಿಕ್ಷಣ ಪಡೆದಿರುತ್ತಾರೆ. ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಗ್ರಂಥಪಾಲಕಿಯಾಗಿ, ಖಾಸಗಿ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ, ಸರಕಾರಿ ಪ್ರೌಢಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಸದ್ಯ ಅಂಶಕಾಲಿಕ ಗ್ರಂಥಪಾಲಕಿ ಹಾಗೂ ಎಲ್.ಐ.ಸಿ. ಅಡ್ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.