ಬಡಗನ್ನೂರುಃ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಪಟ್ಟೆ, ಕೌಡಿಚ್ಚಾರ್-ಮುಡಿಪಿನಡ್ಕ ಲೋಕೋಪಯೋಗಿ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರವೊಂದು ಮೇ. 21 ರಂದು ಸುರಿದ ಗಾಳಿ, ಮಳೆಗೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಟಿ.ಸಿ ಎರಡು ಕಂಬ ಹಾಗೂ ಇತರ ಎರಡು ಕಂಬ ಒಟ್ಟು ನಾಲ್ಕು ಕಂಬ ಮುರಿದು ಬಿದ್ದು, ಮಸ್ಕಾಂ ಇಲಾಖೆಗೆ ಅಪಾರ ನಷ್ಟವಾಗಿದೆ. ಬೆಳಗಿನ ಜಾವದಲ್ಲಿ ರಸ್ತೆ ಸುಮಾರು 3 ತಾಸು ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಈ ಎಲ್ಲಾ ಅವಘಢಗಳಿಗೆ ಅರಣ್ಯ ಇಲಾಖೆ ಕಾರಣ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರ ತೆರವು ಗೊಳಿಸುವಂತೆ ಅರಣ್ಯ ಇಲಾಖೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬರೆದುಕೊಂಡರು. ಗ್ರಾ.ಪಂ ನಿರ್ಣಯ ನಿರ್ಲಕ್ಷ್ಯ ಮಾಡುತ್ತಾರೆ ಹೊರತು ಅಪಾಯಕಾರಿ ಮರ ತೆರವು ಅಡ್ಡಿತರುತ್ತಾರೆ ಎಂದು ಗ್ರಾಮಸ್ಥರು ಅರೋಪಿಸಿದರು. ಮುರಿದು ಹೋದ ವಿದ್ಯುತ್ ಕಂಬ ದುರಸ್ತಿ ಕಾರ್ಯ ಜಾರೂರಾಗಿ ನಡೆಯುತ್ತಿದೆ.