ಲಿಟ್ಲ್ ಫ್ಲವರ್ ಶಾಲೆಯಲ್ಲಿ ಕಲರವ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

0

ಪುತ್ತೂರು: ದರ್ಬೆಯಲ್ಲಿರುವ ಮೇಘ ಕಲಾ ಆರ್ಟ್ಸ್ ಮೇಘ ಡಾನ್ಸ್ ಸ್ಟುಡಿಯೋ ಹಾಗೂ ಮುರಳಿ ಬ್ರದರ್ಸ್ ಡಾನ್ಸ್ ಕ್ರೂ ಪುತ್ತೂರು ಇದರ ವತಿಯಿಂದ 7 ದಿನಗಳ ಕಾಲ ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ನಡೆದ `ಕಲರವ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಮೇ.20ರಂದು ನಡೆಯಿತು.


ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಗರ ಠಾಣೆಯ ಎಸ್.ಐ ಸರಸ್ವತಿ ಮಾತನಾಡಿ, ಸಾಮಾಜಿಕ ಜಾಲತಾಣಗಳ ಸಾಧಕ, ಬಾಧಕಗಳ ಬಗ್ಗೆ ವಿವರಿಸಿದ ಅವರು ಮಕ್ಕಳಲ್ಲಿ ಮೊಬೈಲ್ ಬಳಕೆಯ ಬಗ್ಗೆ ಪೋಷಕರು ಮುಂಜಾಗ್ರತೆ ವಹಿಸುವಂತೆ ತಿಳಿಸಿದರು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಚೇತನಾ ಹಾಸ್ಪಿಟಲ್ ವೈದ್ಯ ಡಾ.ಜೆ.ಸಿ ಅಡಿಗ ಮಾತನಾಡಿ, ಡಾನ್ಸ್ ಸಂಗೀತದಿಂದಲೂ ಪ್ರತಿಯೊಬ್ಬರ ಅರೋಗ್ಯ ಕಾಪಾಡಿಕೊಳ್ಳಬಹುದು. ಆರೋಗ್ಯ ರಕ್ಷಣೆಯೇ ಪ್ರಾಮುಖ್ಯವಾಗಿದ್ದು ಸಕ್ಕರೆ ಕಾಯಿಲೆಯನ್ನು ಆದಷ್ಟು ನಿಯಂತ್ರಣದಲ್ಲಿಡಬೇಕು ಎಂದರು.

ಸಮ್ಮರ್ ಕ್ಯಾಂಪ್‌ನ ಸಂಪನ್ಮೂಲ ವ್ಯಕ್ತಿ ದಿನೇಶ್ ರೈ ಕಡಬ ಮಾತನಾಡಿ, ಸಮ್ಮರ್ ಕ್ಯಾಂಪ್‌ನ ವಿಶೇಷತೆಗಳ ಬಗ್ಗೆ ತಿಳಿಸಿದರು.
ಎಸ್.ಐ ಸರಸ್ವತಿ ಮಾತನಾಡಿ, ಪ್ರಥಮ ಬಾರಿಗೆ ನಮ್ಮ ಶಾಲೆಯಲ್ಲಿ ಇಂತಹ ಕಾರ್ಯಕ್ರಮ ನಡೆದಿದ್ದು ಅರ್ಥಪೂರ್ಣವಾಗಿ ನಡೆದಿದೆ. ಕ್ಯಾಂಪ್ ಮೂಲಕ ಮಕ್ಕಳಿಗೆ ಉತ್ತಮ ಸಂದೇಶ ಪಡೆದುಕೊಳ್ಳುವಂತಾಗಿದೆ ಎಂದರು.


ಎಎಸ್‌ಐ ಕೃಷ್ಣಪ್ಪ, ಮುರಳಿ ಟೀಮ್ ಮೇಘ ಕಲಾ ಆರ್ಟ್ಸ್‌ನ ಶಾರದಾ ದಾಮೋದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.. ಟೈಮ್ಸ್ ಆಫ್ ಕುಡ್ಲ ಸುದ್ದಿ ನ್ಯೂಸ್ ಹಾಗೂ ಡಿ.ಕೆ ಟಿವಿ ಐ ಟ್ಯೂಬ್ ಚಂದನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹರೀಶ್ ಪಿ ಪಡುಮಲೆ ಹಾಗೂ ಸಂದೇಶ್ ರೈ ಕೊಸ್ಟ್ ಲ್ ಹೋಮ್ ಇವರು ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನೆರವೇರಿಸಿದರು.

LEAVE A REPLY

Please enter your comment!
Please enter your name here