ಜೂ.27ರೊಳಗೆ ಅಂತಿಮ ಮತದಾರರ ಪಟ್ಟಿ-ಚುನಾವಣಾ ಆಯೋಗ ಸೂಚನೆ

0

ಮೇ 26ರಿಂದ ಜೂ.4ರೊಳಗೆ ಮತದಾರರ ಪಟ್ಟಿ ತಯಾರಿ
ಜೂ.14ರೊಳಗೆ ಕರಡು ಪಟ್ಟಿ
ಜೂ.19 ಆಕ್ಷೇಪಣೆ ಸಲ್ಲಿಕೆಗೆ ಕಡೆ ದಿನ
ಜೂ.27ರೊಳಗೆ ಅಂತಿಮ ಪಟ್ಟಿ

ಪುತ್ತೂರು:ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಕ್ಷೇತ್ರ ವಿಂಗಡಣೆ ಅಧಿಸೂಚನೆಯನ್ನು ಆಧರಿಸಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ರಾಜ್ಯ ಚುನಾವಣಾ ಆಯೊಗ ಸುತ್ತೋಲೆ ಹೊರಡಿಸಿದೆ.

ಮೇ 26ರಿಂದ ಜೂನ್ 4ರ ಒಳಗೆ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಗುರುತಿಸುವುದು, ಪಟ್ಟಿ ಸಿದ್ಧ ಪಡಿಸಿ ಜೂನ್ 14ರೊಳಗೆ ಮತದಾರರ ಕರಡು ಪಟ್ಟಿ ಪ್ರಕಟಿಸಬೇಕು,ಜೂ.19ಕ್ಕೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನ.ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ಜೂ.೨೭ರೊಳಗೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಆಯೋಗ ತಿಳಿಸಿದೆ.

LEAVE A REPLY

Please enter your comment!
Please enter your name here