ಪುತ್ತೂರು: ಪೊರ್ಲುದ ಕೆಯ್ಯೂರು ಸಮಿತಿ ಮತ್ತು ಕೆಯ್ಯೂರು – ಮಾಡಾವು ವರ್ತಕ ಸಂಘ ಇದರ ವತಿಯಿಂದ ಮೇ.27ರಂದು ಸ್ವಚ್ಛತಾ ಜಾಗೃತಿ ಜಾಥಾ ನಡೆಯಿತು.
ಸಮಿತಿಯ ಗೌರವಾಧ್ಯಕ್ಷ ದಂಬೆಕ್ಕಾನ ಸದಾಶಿವ ರೈಯವರು ದೇವಿನಗರದಲ್ಲಿ ಜಾಥಾವನ್ನು ಉದ್ಘಾಟಿಸಿ ಸ್ವಚ್ಛತೆಯ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿ, ಖರ್ಚಿನ ಬಾಬ್ತು 1000ರೂ.ಗಳ ಪ್ರೋತ್ಸಾಹ ಧನ ಸಹಾಯ ನೀಡುವ ಮೂಲಕ ಸಮಿತಿಯ ಕಾರ್ಯಕ್ಕೆ ಶುಭವನ್ನು ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಎ.ಕೆ. ಜಯರಾಮ ರೈ, ಹಾಲಿ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಪೊರ್ಲುದ ಕೆಯ್ಯೂರು ಸಮಿತಿಯ ಸಂಪನ್ಮೂಲ ವ್ಯಕ್ತಿ ಇಬ್ರಾಹಿಂ ಮಾಸ್ಟರ್ ಇವರುಗಳು ತ್ಯಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮಾತುಗಳನ್ನು ಹೇಳಿ ಶುಭ ಹಾರೈಸಿದರು. ಬಂಟರ ಸಂಘದ ಗ್ರಾಮ ಸಮಿತಿಯ ಅಧ್ಯಕ್ಷ ರಮೇಶ್ ರೈ ಬೊಳಿಕ್ಕಳ ಅಬ್ಬೆಜಾಲು ಶುಭ ಹಾರೈಸಿ ,ಅವರು ಕಳೆದ ಸಾಲಿನಲ್ಲಿ ವಾಗ್ದಾನ ನೀಡಿರುವ ಪೈಪ್ ಕಾಂಪೋಸ್ಟ್ ಸಲಕರಣೆಗಳನ್ನು ಅವಶ್ಯಕತೆ ಇರುವ ಫಲಾನುಭವಿಗಳು ಪಡೆದುಕೊಳ್ಳುವಂತೆ ವಿನಂತಿಸಿದರು. ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್, ಪೊರ್ಲುದ ಕೆಯ್ಯೂರು ಸಮಿತಿಯ ಅಧ್ಯಕ್ಷ ವಿಶ್ವನಾಥ ಪೂಜಾರಿ, ಶ್ರೀ ದುರ್ಗಾ ಟ್ರೇಡರ್ಸ್ ನ ಚಂದ್ರಶೇಖರ ಶೆಟ್ಟಿ, ಎಲ್ಯಣ್ಣ ನಾಯ್ಕ ಪಲ್ಲತಡ್ಕ , ಪ್ರಮಿತ್ ರಾಜ್ ಕೈತಡ್ಕ ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಇ. ಸುರೇಂದ್ರ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪೊರ್ಲುದ ಕೆಯ್ಯೂರು ಸಮಿತಿಯ ಕಾರ್ಯದರ್ಶಿ ಆನಂದ ರೈ ವಂದಿಸಿದರು. ಪಂಚಾಯತ್ ಸಿಬ್ಬಂದಿ ರಾಕೇಶ್ ಸಹಕರಿಸಿದರು. ಬಳಿಕ ನಡೆದ ಸ್ವಚ್ಛತಾ ಕಾರ್ಯದಲ್ಲಿ, ಇಬ್ರಾಹಿಂ ಮಾಸ್ಟರ್, ವಿಶ್ವನಾಥ ಪೂಜಾರಿ ಕೆಂಗುಡೇಲು, ಆನಂದ ರೈ ದೇವಿನಗರ, ಪ್ರಮಿತ್ ರಾಜ್ ಕೈತಡ್ಕ , ಅಬ್ದುಲ್ ಖಾದರ್ ಮೇರ್ಲ, ಇಬ್ಬರು ಆಳುಗಳ ಜೊತೆ ಸೇರಿ ದೇವಿನಗರದಿಂದ ಕಟ್ಟತ್ತಾರು ತನಕ ಸುಮಾರು 24 ಚೀಲ ಒಣ ತ್ಯಾಜ್ಯ ಸಂಗ್ರಹಿಸಿ, ಗ್ರಾಮ ಪಂಚಾಯತ್ ನ ಸ್ವಚ್ಛತಾ ವಾಹನದಲ್ಲಿ ಸಂಜೀವಿನಿ ತಂಡದ ಸಹಾಯಕರ ನೆರವಿನೊಂದಿ ಗೆ ತ್ಯಾಜ್ಯ ಸಂಗ್ರಹ ಘಟಕಕ್ಕೆ ತಲುಪಿಸಲಾಯಿತು.