ನೆಲ್ಯಾಡಿ: ವಿಪರೀತ ಮದ್ಯ ಸೇವಿಸಿ ಸಾವು

0

ನೆಲ್ಯಾಡಿ: ವಿಪರೀತ ಮದ್ಯ ಸೇವಿಸಿ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಬಜತ್ತೂರು ಗ್ರಾಮದ ಮೀನಕೋಡಿ ಎಂಬಲ್ಲಿ ಮೇ 28ರಂದು ನಡೆದಿದೆ.


ಬಜತ್ತೂರು ಗ್ರಾಮದ ಮೀನಕೋಡಿ ನಿವಾಸಿ ಜಗದೀಶ(36ವ.)ಮೃತಪಟ್ಟವರಾಗಿದ್ದಾರೆ. ಜಗದೀಶ್‌ರವರಿಗೆ ವಿಪರೀತ ಅಮಲು ಪದಾರ್ಥ ಸೇವಿಸುವ ಚಟವಿದ್ದು ಮೇ 28ರಂದು ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಪೇಟೆಗೆಂದು ಹೋದವರು ಮಧ್ಯಾಹ್ನ 3 ಗಂಟೆಗೆ ಮೀನಕೋಡಿ ಎಂಬಲ್ಲಿಗೆ ಬಂದವರು ಮನೆ ಕಡೆಗೆ ಹೋಗುವ ದಾರಿಯಲ್ಲಿ ಬಿದ್ದಿದ್ದರು. ಇದನ್ನು ಗಮನಿಸಿದ ಅವರ ಸಹೋದರ ಚಂದ್ರಶೇಖರರವರು 108 ಆಂಬುಲೆನ್ಸ್‌ಗೆ ಮಾಡಿದ್ದು ಅವರು ಬಂದು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮೃತರ ಸಹೋದರ ಚಂದ್ರಶೇಖರ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here