ಆಲಂಕಾರು: ರಾಮಕುಂಜ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನ್ಹಸ್ರವರು ಮೇ 31ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ. ಜೆರಾಲ್ಡ್ ಮಸ್ಕರೇನ್ಹಸ್ರವರು ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕುರ್ಪೆ ಎಂಬಲ್ಲಿ ವಲೇರಿಯನ್ ಮಸ್ಕರೇನ್ಹಸ್ ಹಾಗು ಸೆವ್ರಿನ್ ವೇಗಸ್ ದಂಪತಿಯ ಪುತ್ರರಾಗಿ 1963ರಲ್ಲಿ ಜನಿಸಿ ಪ್ರಾಥಮಿಕ ಶಿಕ್ಷಣವನ್ನು ಸಂತ ಪಿಲೋಮಿನ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿ, ಪ್ರೌಢ ಶಿಕ್ಷಣ ಹಾಗು ಪಿ.ಯು.ಸಿ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜ್ ಉಪ್ಪಿನಂಗಡಿಯಲ್ಲಿ ಪೂರೈಸಿ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗದಲ್ಲಿ ಗ್ರಾಜ್ಯುಯೇಟ್ ಡಿಪ್ಲೋಮೊ ಇನ್ ಪಂಚಾಯತ್ರಾಜ್ ಪಡೆದಿದ್ದಾರೆ.
1981ರಲ್ಲಿ ಅಂಚೆ ಇಲಾಖೆಯಲ್ಲಿ ಇಲಾಖೇತರ ನೌಕರರಾಗಿ ಸೇವೆ ಆರಂಭಿಸಿ, 1983ರಲ್ಲಿ 34ನೇ ನೆಕ್ಕಿಲಾಡಿ ವಿಲೇಜ್ ಪಂಚಾಯತ್ನಲ್ಲಿ ಬಿಲ್ ವಸೂಲಿಗಾರರಾಗಿ, 1987ರಲ್ಲಿ ಕೋಡಿಂಬಾಡಿ ಮಂಡಲ ಪಂಚಾಯತ್ನಲ್ಲಿ ಬಿಲ್ ವಸೂಲಿಗಾರರಾಗಿ, 1994 ರಿಂದ 34 ನೆಕ್ಕಿಲಾಡಿ ಗ್ರಾಮ ಪಂಚಾಯತದಲ್ಲಿ ಬಿಲ್ ವಸೂಲಿಗಾರರಾಗಿ, 1997 ರಿಂದ 2000ರ ವರೆಗೆ ಶಿರಾಡಿ ಗ್ರಾಮ ಪಂಚಾಯತ್ನಲ್ಲಿ ಗ್ರೇಡ್ 2 ಕಾರ್ಯದರ್ಶಿಯಾಗಿ, 2000ರಿಂದ 2008ರ ವರೆಗೆ ನೆಲ್ಯಾಡಿ ಗ್ರಾಮ ಪಂಚಾಯತ್ನಲ್ಲಿ ಗ್ರೇಡ್ 2 ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2008ರಲ್ಲಿ ಗ್ರೇಡ್ 1 ಕಾರ್ಯದರ್ಶಿಯಾಗಿ ಪದೋನ್ನತಿ ಪಡೆದು ಉಪ್ಪಿನಂಗಡಿ ಗ್ರಾಮ ಪಂಚಾಯತ್ಗೆ ವರ್ಗಾವಣೆಗೊಂಡು 2012ರವರೆಗೆ ಗ್ರೇಡ್ 1 ಕಾರ್ಯದರ್ಶಿಯಾಗಿ ನಂತರ 2 ತಿಂಗಳು ಬನ್ನೂರು ಗ್ರಾಮ ಪಂಚಾಯತ್ನಲ್ಲಿ ಗ್ರೇಡ್ 1 ಕಾರ್ಯದರ್ಶಿಯಾಗಿ, ಅಗಸ್ಟ್ 2012ರಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ಪದೋನ್ನತಿಗೊಂಡು ನರಿಮೊಗ್ರು ಗ್ರಾಮ ಪಂಚಾಯತ್ನಲ್ಲಿ ಮತ್ತು 2018ರಿಂದ ರಾಮಕುಂಜ ಗ್ರಾಮ ಪಂಚಾಯತ್ನಲ್ಲಿ ಸೇವೆ ಸಲ್ಲಿಸಿ ಮೇ.31 ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ. ಪ್ರಸಕ್ತ ನೆಕ್ಕಿಲಾಡಿ ಗ್ರಾಮದ ನೆಕ್ಕಲ ಎಂಬಲ್ಲಿ ಪತ್ನಿ ಗೀತಾ ಕೆ.ವಿ, ಪುತ್ರ ಜ್ವಾಲಿನ್ ಮಸ್ಕರೇನಸ್ಹ್, ಪುತ್ರಿ ಜೋತ್ಸ್ನಾ ಮಸ್ಕರೇನಸ್ರವರೊಂದಿಗೆ ವಾಸವಾಗಿದ್ದಾರೆ.