3,99,870 ರೂ ನಿವ್ವಳ ಲಾಭ; 16% ಡಿವಿಡೆಂಡ್
ಪುತ್ತೂರು: ಭಕ್ತಕೋಡಿ ಹಾಲು ಉತ್ಪಾದಕರ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ.4,14,07,519.88 ವ್ಯವಹಾರ ಮಾಡಿದ್ದು ರೂ.90,60,381.84ಗಳ 2,98,510.2 ಲೀಟರ್ ಹಾಲನ್ನು ಖರೀದಿಸಿ 2,10,390 ರೂ.ಗಳ 4901 ಲೀಟರ್ ಹಾಲನ್ನು ಸ್ಥಳೀಯವಾಗಿ ಸಂಘದಿಂದ ಮಾರಾಟ ಮಾಡಲಾಗಿದೆ. ಹಾಗೂ 96,49,732.87 ರೂ.ಗಳ 2,94,913 ಕೆ.ಜಿ ಹಾಲನ್ನು ದ.ಕ ಹಾಲು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ಅದೇ ರೀತಿ 21,79,250.00 ರೂಗಳ 98.5 ಟನ್ ನಂದಿನಿ ಪಶು ಆಹಾರ ಹಾಗೂ ರೂ.55,750.00 ರೂಗಳ ಲವಣ ಮಿಶ್ರಣ ಆಹಾರ ಹಾಲು ಉತ್ಪಾದಕರಿಗೆ ಸಮರ್ಕಕವಾಗಿ ವಿತರಣೆ ಮಾಡಿದೆ.
ವರದಿ ಸಾಲಿನಲ್ಲಿ ಸಂಘವು 3,99,870 ರೂ ನಿವ್ವಲ ಲಾಭ ಗಳಿಸಿದ್ದು ಸದಸ್ಯರಿಗೆ 16% ಡಿವಿಡೆಂಡ್ ಹಾಗೂ ಪ್ರತೀ ಲೀಟರಿಗೆ ರೂ.66 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಹೇಳಿದರು.
ವಾಟ್ಸಾಪ್ ಗ್ರೂಪ್ ರಚಿಸಲು ಆಗ್ರಹ:
ಹಾಲು ಸೊಸೈಟಿಯ ಸದಸ್ಯರನ್ನೊಳಗೊಂಡ ವಾಟ್ಸಾಪ್ ಗ್ರೂಪ್ ರಚಿಸಿ ಅದರಲ್ಲಿ ಸಂಘದ ಹಾಗೂ ಒಕ್ಕೂಟದ ಮಾಹಿತಿಯನ್ನು ನೀಡುವಂತೆ ಸದಸ್ಯರೋರ್ವರು ಮನವಿ ಮಾಡಿದರು. ಇದನ್ನು ಸಭೆಯಲ್ಲಿ ಪುರಸ್ಕರಿಸಲಾಯಿತು. ಸಂಘದ ಕಾರ್ಯದರ್ಶಿಯವರು ಸಂಘದ ಸಕ್ರಿಯ ಸದಸ್ಯರನ್ನೊಳಗೊಂಡ ವಾಟ್ಸಾಪ್ ಗ್ರೂಪ್ ರಚಿಸುವುದು ಮತ್ತು ಅದರಲ್ಲಿ ಸಂಘಕ್ಕೆ ಸಂಬಂಧಿಸಿದ ಮಾಹಿತಿಯನ್ನು ರವಾನಿಸುವುದು ಎಂದು ನಿರ್ಣಯಿಸಲಾಯಿತು.
ಕೇರಳ ಮಾದರಿ ಇಲ್ಲಿಯೂ ಆಗಬೇಕು:
ಕೇರಳದಲ್ಲಿ ಲೀಟರ್ ಹಾಲಿಗೆ ರೂ.45 ಸಿಗುತ್ತಿದ್ದು ಹೈನುಗಾರರಿಗೆ ತುಂಬ ಉಪಯುಕ್ತವಾಗಿದೆ. ನಮ್ಮಲ್ಲೂ ಅದೇ ರೀತಿ ಆಗಬೇಕು ಎಂದು ಸದಸ್ಯ ಆನಂದ ಸೂರಂಬೈಲು ಹೇಳಿದರು.
ಹುಲ್ಲು ಬೆಳೆಯಲು ಅವಕಾಶ:
ಯಾರಾದರೂ ತಮ್ಮ ಖಾಲಿ ಜಮೀನಿನಲ್ಲಿ ಹುಲ್ಲು ಬೆಳೆಯಲು ಆಸಕ್ತಿಯಿದ್ದರೆ ಹುಲ್ಲು ಬೆಳೆಸಬೇಕು. ಒಂದು ಎಕ್ರೆಗೆ ಸುಮಾರು 20 ಸಾವಿರ ರೂ, ಅರ್ದ ಎಕ್ರೆಗೆ 10 ಸಾವಿರ ರೂ ಹಾಗೂ 25 ಸೆಂಟ್ಸ್‌ಗೆ 5 ಸಾವಿರ ರೂ ಒಕ್ಕೂಟದಿಂದ ಸಿಗುತ್ತದೆ ಎಂದು ಒಕ್ಕೂಟದ ವಿಸ್ತರಣಾಧಿಕಾರಿ ಕೆ ನಾಗೇಶ್ ಹೇಳಿದರು.ಸಂಘದ ಕಾರ್ಯದರ್ಶಿ ಪ್ರಪುಲ್ಲನಾಥ ರೈ ವರದಿ ವಾಚಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಿಶ್ವನಾಥ ರೈ ಬಿ, ನಿರ್ದೇಶಕರಾದ ಎಸ್.ಡಿ ವಸಂತ, ಅದ್ರಾಮ ಕೆ, ಬೆಳಿಯಪ್ಪ ಗೌಡ ಕೆ.ಎಂ, ಯಶೋಧರ ರೈ, ಪುಷ್ಪಾವತಿ ಕೆ, ಕವಿತಾ ಕೆ, ಕೊರಗಪ್ಪ ಬಿ, ಐತ್ತಪ್ಪ ನಾಯ್ಕ, ಶಶಿಧರ ಎಸ್.ಡಿ, ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಉಪಸ್ಥಿತರಿದ್ದರು. ಸಂಘದ ಹಾಲು ಪರೀಕ್ಷಕ ಐತ್ತಪ್ಪ ಪಿ ಸಹಕರಿಸಿದರು. ಸಭೆಯಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.