ಜಿಲ್ಲಾ ಪ್ರಭಾರ ಎಸ್ಪಿಯಾಗಿ ಸಿ.ಬಿ.ರಿಷ್ಯಂತ್ ನೇಮಕ

0

ಪುತ್ತೂರು:ದ.ಕ.ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿರುವ ಡಾ|ಅಮಟೆ ವಿಕ್ರಂ ಅವರು ರಜೆಯಲ್ಲಿದ್ದು ಪ್ರಭಾರ ಪೊಲೀಸ್ ಅಧೀಕ್ಷಕರಾಗಿ ಸಿ.ಬಿ.ರಿಷ್ಯಂತ್ ಅವರನ್ನು ನೇಮಕಗೊಳಿಸಿ ವರ್ಗಾವಣೆ ಮಾಡಲಾಗಿದೆ.

2013ರ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಸಿ.ಬಿ.ರಿಷ್ಯಂತ್ ಅವರು ಈ ಹಿಂದೆ ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಮೂಲತಹ ಬೆಂಗಳೂರು ನಿವಾಸಿಯಾಗಿರುವ ಸಿ.ಬಿ.ರಿಷ್ಯಂತ್ ಪುತ್ತೂರು ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ಬಳಿಕ ಎಸ್‌ಪಿಯಾಗಿ ಪದೋನ್ನತಿ ಹೊಂದಿ ಬಾಗಲಕೋಟೆ, ದಾವಣಗೆರೆ, ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಚುನಾವಣೆ ಸಂದರ್ಭ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲೇ ಕರ್ತವ್ಯಕ್ಕೆ ನಿಯುಕ್ತಿಗೊಳಿಸಲಾಗಿತ್ತು. ಅಲ್ಲಿಂದ ಇದೀಗ ದ.ಕ.ಜಿಲ್ಲಾ ಪ್ರಭಾರ ಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದ್ದು ಮೇ 31ರಂದು ಅವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here