ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಾರಂಭೋತ್ಸವ

0

ಪುತ್ತೂರು: ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಮೇ.31ರಂದು ನೆರವೇರಿತು.

ಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷರಾಗಿರುವ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಪ್ರಕಾಶ್ ರೈ ಬೈಲಾಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲೆಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಶಾಲಾ ಪ್ರವೇಶ ಧ್ವಾರದ ಬಳಿಯಲ್ಲಿ ಪುಷ್ಪಾರ್ಚನೆಯೊಂದಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು. ನಂತರ ಮೆರವಣಿಗೆಯ ಮೂಲಕ ತರಗತಿಗೆ ಕರೆತರಲಾಯಿತು. ಮುಖ್ಯಗುರು ನಾರಾಯಣ ಕೆ.ಯವರು ಶೈಕ್ಷಣಿಕ ವರ್ಷದ ಮಾರ್ಗದರ್ಶನವನ್ನು ನೀಡಿದರು. ಹಿರಿಯ ಶಿಕ್ಷಕ ರಾಮಚಂದ್ರ ಕೆ. ಸ್ವಾಗತಿಸಿ, ಸಹ ಶಿಕ್ಷಕಿ ಶ್ಯಾಮಲ ಎಂ. ವಂದಿಸಿದರು. ಸಹ ಶಿಕ್ಷಕರಾದ ರಾಮಕೃಷ್ಣ ಎ., ಪ್ರಕಾಶ್ ಎನ್., ಸವಿತಾ ಕೆ., ವಿದ್ಯಾಲಕ್ಷ್ಮಿ, ಹಾಗೂ ಜಯಲತಾ ಕೆ. ಕಾರ್ಯಕ್ರಮದಲ್ಲಿ ಸಹಕರಿಸಿದರು.

.

LEAVE A REPLY

Please enter your comment!
Please enter your name here