ಪುತ್ತೂರು: 21 ಸಾವಿರ ಸರಕಾರಿ ನೌಕರರ ಬಳಿ ಬಿಪಿಎಲ್ ಕಾರ್ಡ್ ಇರುವುದನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪತ್ತೆ ಹಚ್ಚಿದೆ. ನಕಲಿ ಬಿಪಿಎಲ್ ಕಾರ್ಡ್ ಹೊಂದಿರುವರು ವಿರುಧ್ದ 2021 ಫೆಬ್ರವರಿ ತಿಂಗಳಿನಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಈಗಲೂ ಮುಂದುವರಿದಿದೆ.
21,232 ಸರಕಾರಿ ನೌಕರರು ಬಿಪಿಎಲ್ ಹೊಂದಿದ್ದು ಅವರಿಂದ 11.2 ಕೋಟಿ ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಅಲ್ಲದೆ 4.6 ಲಕ್ಷ ನಕಲಿ ಬಿಪಿಎಲ್ ಕಾರ್ಡ್ ಹೊಂದಿದವರಿಂದ 13.5 ಕೋಟಿ ರೂ ದಂಡವನ್ನು ಸಂಗ್ರಹಿಸಲಾಗಿದೆ. ಆಧಾರ್ ಸಂಖ್ಯೆ ಬಳಸಿ ವಿವಿಧ ಇಲಾಖೆಗಳ ಅನರ್ಹ ಫಲಾನುಭವಿಗಳ ಡೇಟಾ ಸಂಗ್ರಹಿಸಲಾಗುತ್ತಿದೆ.