ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಡಬ ಕಚೇರಿ ಸಿಬ್ಬಂದಿ ಶೇಷಮ್ಮ ನಿವೃತ್ತಿ

0

ಪುತ್ತೂರು: ಕಳೆದ 23 ವರ್ಷಗಳಿಂದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಡಬ ಕಚೇರಿಯಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ಶೇಷಮ್ಮ ಅವರು ಮೇ.31ರಂದು ನಿವೃತ್ತರಾಗಿದ್ದಾರೆ.

ಶೇಷಮ್ಮ ಅವರು 2000ನೇ ಇಸವಿಯಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಡಬ ಕಚೇರಿಯಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದರು. ಸುಮಾರು 23 ವರ್ಷ ಸೇವೆ ಸಲ್ಲಿಸಿ, ಮೇ 31ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಇವರ ಪತಿ ದಿ.ಭಾಸ್ಕರ ಅವರು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಪುತ್ರರಾದ ತೀರ್ಥಕುಮಾರ್, ಪ್ರಕಾಶ್, ಸೊಸೆಯಂದಿರಾದ ಶೃತಿ, ಹರ್ಷಿತಾ, ಮೊಮ್ಮಗ ಅಯಾನ್ಸ್ ಅವರ ಜೊತೆ ಕೋಡಿಂಬಾಳ ಗ್ರಾಮದ ಪಾದೆ ಎಂಬಲ್ಲಿ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here