ಮಂಗಳೂರು:ದ.ಕ ಜಿಲ್ಲೆಗೆ ಕಳೆದ 9 ವರ್ಷಗಳಲ್ಲಿ ಕೇಂದ್ರದಿಂದ ವಿವಿಧ ಕ್ಷೇತ್ರಗಳಿಗೆ 38,661.96 ಕೋಟಿ ರೂ.ಅನುದಾನ ಹರಿದು ಬಂದಿದೆ. ಇನ್ನೂ 16 ಸಾವಿರ ಕೋಟಿ ರೂಪಾಯಿಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ದ.ಕ.ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ 3289 ಕೋಟಿ ರೂ, ನವ ಮಂಗಳೂರು ಬಂದರು ಅಭಿವೃದ್ದಿಗೆ 1081 ಕೋಟಿ ರೂ., ಸಾಗರ ಮಾಲ ಯೋಜನೆಗೆ 465 ಕೋಟಿ, ಕುದುರೆ ಮುಖ ಕಬ್ಬಿಣ ಅದಿರು ಸಂಸ್ಥೆಗೆ 1081 ಕೋಟಿ, ಯಂ.ಅರ್.ಪಿ.ಎಲ್. 4ನೇ ಹಂತದ ಅಭಿವೃದ್ದಿಗೆ 15 ಸಾವಿರ ಕೋಟಿ, ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗಕ್ಕೆ 1036 ಕೋಟಿ ನೀಡಲಾಗಿದೆ ಎಂದರು.
ರೈಲು ನಿಲ್ದಾಣಗಳ ಅಭಿವೃದ್ಧಿ: 2023-24ನೇ ಸಾಲಿನಲ್ಲಿ ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಬಂಟ್ವಾಳ, ಸುಬ್ರಹ್ಮಣ್ಯ ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಡಿ ಅಭಿವೃದ್ದಿ ಪಡಿಸಲಾಗುವುದು. ಮೊಬೈಲ್ ನೆಟ್‌ವರ್ಕ್ ಸಿಗದ ಹಳ್ಳಿ ಹಳ್ಳಿಗಳಲ್ಲಿ 4ಜಿ ಸಂಪರ್ಕ ಕಲ್ಪಿಸುವ ಉದ್ದೇಶದೊಂದಿಗೆ ಜಿಲ್ಲೆಯ 90 ಹಳ್ಳಿಗಳಲ್ಲಿ ತಲಾ 1.5 ಕೋಟಿ ರೂ.ವೆಚ್ಚದಲ್ಲಿ 4ಜಿ ಟವರ್ ಸ್ಥಾಪನೆಗೆ ದೂರ ಸಂಪರ್ಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 60 ಕಡೆ ಟವರ್ ಸ್ಥಾಪನೆಗೆ ಆದೇಶ ದೊರಕಿದೆ. ಸ್ಥಳ ಪರಿಶೀಲನೆ ನಡೆಯುತ್ತಿದೆ ಎಂದು ಕಟೀಲ್ ಹೇಳಿದರು.
ಶಿರಾಡಿ ಘಾಟಿಯಲ್ಲಿ ಫ್ಲೈಓವರ್: ಶಿರಾಡಿ ಘಾಟಿಯಲ್ಲಿ ಧೀರ್ಘ ಸುರಂಗ ಮಾರ್ಗ ಪ್ರಸ್ತಾವನೆಯನ್ನು ಕೈಬಿಟ್ಟು ಪ್ಲೈ ಓವರ್, 3 ಸುರಂಗ ಮಾರ್ಗಗಳನ್ನು ನಿರ್ಮಾಣ ಮಾಡಲಾಗುವುದು ಎಂದು ನಳಿನ್ ಕುಮಾರ್ ಹೇಳಿದರು.
ಮೋದಿಯವರು ಬಂದ ಬಳಿಕ ಪರಿವರ್ತನೆಯ ಯುಗಾರಂಭ: ನರೇಂದ್ರ ಮೋದಿಯವರು 2014ರಲ್ಲಿ ಈ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಉದ್ಘೋಷ ಮಾಡಿದ್ದರು. ಈ ಚಿಂತನೆಯ ಆಧಾರದಲ್ಲಿ ಬಡವರ ಉದ್ಧಾರ, ಕಲ್ಯಾಣಕ್ಕಾಗಿ ಅನೇಕ ಯೋಜನೆಗಳು ಜಾರಿಗೆ ಬಂದವು ಎಂದು ಹೇಳಿದ ಕಟೀಲ್ ಅವರು, 2014ರ ಮೊದಲ ಮತ್ತು 2014ರ ನಂತರದ ಭಾರತವನ್ನು ಅವಲೋಕಿಸಿದಾಗ 2014ರ ನಂತರ ದೇಶದಲ್ಲಿ ಪರಿವರ್ತನೆಯ ಯುಗವೇ ಪ್ರಾರಂಭವಾಗಿದೆ. ಒಂದು ಕಾಲ ಘಟ್ಟದಲ್ಲಿ ಭಾರತದಲ್ಲಿ ಚುನಾವಣೆಗಳು ಬಂದಾಗ ಪಕ್ಷಗಳು ಮತ್ತು ಪ್ರಧಾನ ಮಂತ್ರಿ ಅಭ್ಯರ್ಥಿಗಳು, ನಾವು ಭಾರತವನ್ನು ಸಿಂಗಾಪುರ ಮಾಡುತ್ತೇವೆ, ಅಮೇರಿಕಾ ಮಾಡುತ್ತೇವೆ ಎಂದು ಹೇಳುತ್ತಿದ್ದ ಕಾಲವಿತ್ತು. ಆದರೆ ಈಗ ಅಮೇರಿಕಾದ ಅಧ್ಯಕ್ಷರೇ ನಾವು ಭಾರತದಂತೆ ಅಭಿವೃದ್ದಿ ಮಾಡುತ್ತೇವೆ ಎಂದು ಹೇಳುವಷ್ಟರ ಮಟ್ಟಿಗೆ ಮೋದಿಯವರನ್ನು ವಿಶ್ವ ನಾಯಕನಾಗಿ ಒಪ್ಪಿಕೊಂಡಿದ್ದಾರೆ.ಜಗತ್ತು ಭಾರತದತ್ತ ನೋಡುತ್ತಿದೆ. ಮುಂದಿನ ದಿನಗಳಲ್ಲಿ ಭಾರತವೇ ವಿಶ್ವ ನಾಯಕತ್ವವನ್ನು ವಹಿಸಿಕೊಳ್ಳಬೇಕು ಎಂದು ವಿಶ್ವದ ಜನ ನಾಯಕರು ಹೇಳುವಷ್ಟರ ಮಟ್ಟಿಗೆ ಭಾರತವನ್ನು ಮೋದಿಯವರು ಜಗತ್ತಿನ ಎತ್ತರಕ್ಕೆ ಕೊಂಡುಹೋಗಿದ್ದಾರೆ ಕಟೀಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಯಂ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಪ್ರಮುಖರಾದ ಮಾಜಿ ಎಂಎಲ್‌ಸಿ ಮೋನಪ್ಪ ಭಂಡಾರಿ, ರವಿಶಂಕರ್ ಮಿಜಾರ್,ರಾಧಾಕೃಷ್ಣ, ಡಿಚಿmಜಚಿಜ ಬಂಟ್ವಾಳ,ಸುಧೀರ್ ಶೆಟ್ಟಿ ಕಣ್ಣೂರು,ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು