ನೆಹರುನಗರದ ಮನೆಯಿಂದ ಮೂರುವರೆ ತಿಂಗಳ ಹಿಂದೆ ಕಳ್ಳತನ- ವಾರದ ಹಿಂದೆ ಬೆಳಕಿಗೆ – ದೂರು ನೀಡಿದ 1 ವಾರದಲ್ಲಿ ಆರೋಪಿ ಬಂಧನ

0

ಪುತ್ತೂರು: ಪುತ್ತೂರು ನೆಹರುನಗರದಲ್ಲಿ 3 ತಿಂಗಳ ಹಿಂದೆ ನಡೆದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮನೆಕೆಲಸದಾಳನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಕಳವು ಮಾಡಿದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ನಿವೃತ್ತ ಸರಕಾರಿ ಅಭಿಯೋಜಕಿಯಾಗಿದ್ದು ಪ್ರಸ್ತುತ ಮಂಗಳೂರಿನಲ್ಲಿ ಹಿರಿಯ ಸರಕಾರಿ ಅಭಿಯೋಜಕಿಯಾಗಿರುವ ಎಂ ಕೃಷ್ಣವೇಣಿ ಅವರ ಮನೆಯಿಂದ ಚಿನ್ನಾರಭರಣ ಕಳವಾಗಿತ್ತು. ಕಳವಾಗಿರುವ ವಿಚಾರ ಮೂರುವರೆ ತಿಂಗಳ ಬಳಿಕ ಬೆಳಕಿಗೆ ಬಂದಿದ್ದು, ಮನೆಗೆ ನಿತ್ಯ ಕೆಲಸಕ್ಕೆ ಬರುತ್ತಿರುವ ಹಾವೇರಿ ಮೂಲದ ಮಹೇಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಅವರು ಮೇ 27ಕ್ಕೆ ಪುತ್ತೂರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿ ಮಹೇಶ್ ನನ್ನು ಜೂ. 2ರಂದು ಬಂಧಿಸಿದ್ದಾರೆ. ವಿಚಾರಿಸಿದಾಗ ಕಳವು ಮಾಡಿದ ಸೊತ್ತುಗಳ ಕುರಿತು ಮಾಹಿತಿ ನೀಡಿದ್ದಾನೆ. ಕಳವಾದ ಸೊತ್ತುಗಳ ಮೌಲ್ಯ ಒಟ್ಟು ರೂ. 1,93,000 ಆಗಿದ್ದು, ಆರೋಪಿಯಿಂದ ಒಟ್ಟು 24.57 ಗ್ರಾಂ ಚಿನ್ನ ಮತ್ತು 7 ಬಳಿ ಬಣ್ಣದ ಹರಳುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here