ಜೂನ್‌ 11ರಿಂದ ಆಲಂಕಾರಿನ ಭಾರತಿ ಶಾಲೆಯಲ್ಲಿ ಎಸ್.ಪಿ.ವೈ.ಎಸ್.ಎಸ್ ರವರಿಂದ ಉಚಿತ ಯೋಗ ತರಗತಿ

0

ಆಲಂಕಾರು: ಸಂಸ್ಕಾರ,ಸಂಘಟನೆ,ಸೇವೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ.ದ.ಕ ಜಿಲ್ಲೆ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರು ಇವರ ಸಹಯೋಗದೊಂದಿಗೆ ಉಚಿತ ಯೋಗ ತರಗತಿಯು ಜೂ .11 ರಿಂದ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನಲ್ಲಿ ಪ್ರಾರಂಭಗೊಳ್ಳಲಿದೆ.

ಎಸ್.ಪಿ.ವೈ. ಎಸ್ .ಎಸ್ ಯೋಗ ಸಮಿತಿಯು ಸಂಸ್ಕಾರ – ಸಂಘಟನೆ – ಸೇವೆ ಎಂಬ ಧ್ಯೇಯೋದ್ದೇಶದೊಂದಿಗೆ ಕಳೆದ 43 ವರ್ಷಗಳಿಂದ ಸಮಿತಿಯ ಪ್ರಧಾನ ಸಂಚಾಲಕರಾದ ಅ.ರಾ.ರಾಮಸ್ವಾಮಿ ಅಣ್ಣನವರ ಮಾರ್ಗದರ್ಶನದಲ್ಲಿ ನುರಿತ ಯೋಗಶಿಕ್ಷಕರಿಂದ ಸಂಪೂರ್ಣ ಉಚಿತವಾಗಿ ಕರ್ನಾಟಕ ಕೇಂದ್ರವಾಗಿರಿಸಿಕೊಂಡು ವಿವಿಧ ರಾಜ್ಯ, ಹೊರರಾಷ್ಟ್ರಗಳಲ್ಲಿ ನಿತ್ಯ ಸಾವಿರಾರು ಶಾಖೆಗಳ ಮೂಲಕ ಲಕ್ಷಾಂತರ ಜನರಿಗೆ ಯೋಗದ ಮೂಲಕ ಸಂಸ್ಕಾರಯುತ ಜೀವನ ಶೈಲಿಯನ್ನು ನೀಡುತ್ತಿದ್ದು ಮಂಗಳೂರಿನಲ್ಲಿ 200 ಕ್ಕೂ ಹೆಚ್ಚುಶಾಖೆ ಹಾಗೂ ಪುತ್ತೂರಿನಲ್ಲಿ 11 ಶಾಖೆ ಉಪ್ಪಿನಂಗಡಿಯಲ್ಲಿ 2 ಶಾಖೆಗಳ ಮೂಲಕ ಸಾವಿರಾರು ಜನರಿಗೆ ಯೋಗ ಶಿಕ್ಷಣದ ಜೊತೆಗೆ ಆರೋಗ್ಯ,ಧನಾತ್ಮಕ ಚಿಂತನೆ,ಕ್ರಿಯಾಶೀಲ ವ್ಯಕ್ತಿತ್ವ, ಆದರ್ಶ ಕುಟುಂಬದ ತರಬೇತಿ ನೀಡಿ ಸಮಾಜದಲ್ಲಿ ಉತ್ತಮವಾದ ಪರಿವರ್ತನೆಗೆ ಕಾರಣವಾಗಿದೆ.

ಆಲಂಕಾರಿನ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಬೆಳಗ್ಗೆ ಯೋಗ ತರಗತಿ ಆರಂಭಿಸಲುನಿರ್ಧರಿಸಿದೆ.ಈ ತರಗತಿ ಬೆಳಿಗ್ಗೆ 5 :00 ಗಂಟೆಯಿಂದ ಬೆಳಿಗ್ಗೆ 6:30 ರ ತನಕ ನಡೆಯಲಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here