ಪುತ್ತೂರು: ವಿಟ್ಲದಲ್ಲಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜೂ.5ರಂದು ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.
ಸಂಸ್ಥೆಯ ಪ್ರಭಾರ ಪ್ರಾಚಾರ್ಯ ಹರೀಶ್ ಕೆ ಯವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಆವರಣದಲ್ಲಿ ತೆಂಗಿನ ಗಿಡ ನೆಡುವುದರ ಜೊತೆಗೆ ವಿವಿಧ ಜಾತಿಯ ಹಣ್ಣುಗಳ ಬೀಜಗಳನ್ನು ಬಿತ್ತಲಾಯಿತು. ಪರಿಸರ ಸಂರಕ್ಷಣೆ ಎಂಬ ಶೀರ್ಷಿಕೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಿರಿಯ ತರಬೇತಿ ಅಧಿಕಾರಿಗಳಾದ ರತಿ ವಿ, ತೀಥಾಕ್ಷಿ ಎನ್. ಉಪಸ್ಥಿತರಿದ್ದರು. ಕಿರಿಯ ತರಬೇತಿ ಅಧಿಕಾರಿ ಸುಕನ್ಯಾ ರಾವ್ ಸ್ವಾಗತಿಸಿ, ಜೋಯ್ಲಿನ್ ಕ್ರಾಸ್ತಾ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕಾಧಿಕಾರಿಯಾಗಿರುವ ಕಿರಿಯ ತರಬೇತಿ ಅಧಿಕಾರಿ ಶರತ್ ಕುಮಾರ್ ಎಸ್.ಎಚ್. ಕಾರ್ಯಕ್ರಮ ನಿರೂಪಿಸಿದರು. ಬೋಧಕ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.