ರೋಟರಿ ಕ್ಲಬ್ ಪುತ್ತೂರು ಯುವದಿಂದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರೋಟರಿ ಜಲಸಿರಿ ಯೋಜನೆ ಕೊಡುಗೆ

0

ಪುತ್ತೂರು: ರೋಟರಿ ವಲಯ 5 ರ ರೋಟರಿ ಕ್ಲಬ್ ಪುತ್ತೂರು ಯುವದಿಂದ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ “ರೋಟರಿ ಜಲಸಿರಿ ಯೋಜನೆ”ಯ “ಶುದ್ದ ಕುಡಿಯುವ ನೀರಿನ ಘಟಕ”ವನ್ನು ಯನ್ನು ಕೊಡುಗೆಯಾಗಿ ನೀಡಲಾಯಿತು.


ಜೂ.9 ರಂದು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರು ನೀರಿನ ಘಟಕ ಉದ್ಘಾಟಿಸಿ ರೋಟರಿ ಪುತ್ತೂರು ವಲಯ ಸೇನಾನಿ ಡಾ | ಹರ್ಷಕುಮಾರ್ ರೈ ಮಾಡಾವು ಅವರ ಕೊಡುಗೆ ಭಕ್ತರಿಗೆ ಉಪಯೋಗವಾಗಲಿ ಎಂದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ‌ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ್ ಗೌಡ, ಬಿ ಐತ್ರಪ್ಪ ನಾಯ್ಕ್, ರಾಮಚಂದ್ರ ಕಾಮತ್, ಬಿ ಕೆ ವೀಣಾ, ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ರೋಟರಿ ಪುತ್ತೂರು ಯುವ ಅಧ್ಯಕ್ಷೆ ರಾಜೇಶ್ವರಿ ಆಚಾರ್ಯ, ಅಶ್ವಿನಿಕೃಷ್ಣ ಮುಳಿಯ ರೋಟರಿ ಕ್ಲಬ್ ನ ಈವೆಂಟ್ ಮ್ಯಾನೆಜ್ ಮೆಂಟ್ ನ ವಿಶ್ವಾಸ್ ಶೆಣೈ, ರೋಟರಿ ಪುತ್ತೂರು ಯುವ ನಿಯೋಜಿತ ಅಧ್ಯಕ್ಷ ಪಶುಪತಿ ಶರ್ಮ, ರೋಟರಿ ಜಿಲ್ಲಾ ಉಮೇಶ್ ನಾಯಕ್, ಎ ಜೆ ರೈ,
ಪುತ್ತೂರು ಪೂರ್ವದ ಪ್ರಕಾಶ್ ಶೆಟ್ಟಿ, ರೋಟರಿ ಜಿಲ್ಲಾ ಕೆ ನಾರಾಯಣ ಹೆಗ್ಡೆ, ಪದ್ಮನಾಭ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here