ಬಂಟ್ವಾಳ:ಮಾಣಿ ಸಮೀಪದ ಸೂರಿಕುಮೇರ್ ದಿ.ಸುಣ್ಣ ಅಬೂಬಕ್ಕರ್ರವರ ಪುತ್ರ ಅಬ್ದುಲ್ ರಝಾಕ್ (52ವ.)ಹೃದಯಾಘಾತದಿಂದ ಗುರುವಾರ ರಾತ್ರಿ ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿ ನಿಧನ ಹೊಂದಿದರು.
ಕಳೆದ 15 ವರ್ಷಗಳಿಂದ ವಿದೇಶದಲ್ಲಿ ವೃತ್ತಿಯಲ್ಲಿ ಇದ್ದ ಅವರು ರಜೆಯಲ್ಲಿ ಮನೆಗೆ ಬಂದು ಮೂರು ತಿಂಗಳ ಹಿಂದೆಯಷ್ಟೇ ವಾಪಸ್ ಸೌದಿ ಅರೇಬಿಯಾಕ್ಕೆ ತೆರಳಿದ್ದರು.ಸೌದಿ ಅರೇಬಿಯಾದಲ್ಲಿ ಜೂ.9ರಂದು ಶುಕ್ರವಾರ ಆಡಳಿತ ಕಛೇರಿಗಳಿಗೆ ವಾರದ ರಜೆ ಇರುವ ಹಿನ್ನೆಲೆಯಲ್ಲಿ ಮೃತ ಶರೀರದ ಅಂತ್ಯಕ್ರಿಯೆ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.