ಕೆಮ್ಮಾರ ಸರಕಾರಿ ಶಾಲಾ ಮಂತ್ರಿಮಂಡಲ

0

ಮುಖ್ಯಮಂತ್ರಿ; ಮಹಮ್ಮದ್ ಅನಾಸ್, ಮಹಮ್ಮದ್ ಆಶಿಕ್

ಉಪ್ಪಿನಂಗಡಿ: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿನ 2023-24ರ ಸಾಲಿನ ಮಂತ್ರಿಮಂಡಲ ರಚನೆಗಾಗಿ ಜೂ.11ರಂದು ಚುನಾವಣೆ ನಡೆಯಿತು.


ಶಾಲೆಯ ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಚುನಾವಣೆಯ ಪ್ರಕ್ರಿಯೆ ನಡೆಸಿಕೊಟ್ಟರು. ಮುಖ್ಯಮಂತ್ರಿಯಾಗಿ ಮಹಮ್ಮದ್ ಅನಾಸ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಮಹಮ್ಮದ್ ಆಶಿಕ್ ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿ ಝಬೀ ಖಾನ್ ಮತ್ತು ಜಮೀಲತ್ ನೌಶೀನ, ಆರೋಗ್ಯ ಮಂತ್ರಿಯಾಗಿ ಮಹಮ್ಮದ್ ಆದಿಲ್ ಮತ್ತು ಜೋಯಾ, ಆಹಾರ ಮಂತ್ರಿಯಾಗಿ ರಂಶೀನಾ ಮತ್ತು ತಸ್ರೀಫಾ, ಕ್ರೀಡಾ ಮಂತ್ರಿಯಾಗಿ ಮಹಮ್ಮದ್ ರಾಫಿದ್ ಮತ್ತು ಮಹಮ್ಮದ್ ನಿಹಾಲ್, ರಕ್ಷಣಾ ಮಂತ್ರಿಯಾಗಿ ಮಹಮ್ಮದ್ ಹಾಫಿಲ್ ಮತ್ತು ಅಹ್ಮದ್ ನಿಹಾಲ್, ನೀರಾವರಿ ಮಂತ್ರಿಯಾಗಿ ಅಬ್ದುಲ್ ಸಾಹಿಲ್ ಮತ್ತು ಮಹಮ್ಮದ್ ಅಫ್ನಾನ್, ವಾರ್ತಾ ಸಚಿವರಾಗಿ ಸುಲೈಮಾನ್ ಮುಝೈನ್ ಮತ್ತು ಸಲ್ವಾ ಫಾತಿಮಾ, ಸ್ವಚ್ಚತಾ ಮಂತ್ರಿಯಾಗಿ ಮರಿಯಮ್ ಅಫೀಯ ಮತ್ತು ಅಫ್ರೀನಾ, ಕಾನೂನು ಮಂತ್ರಿಯಾಗಿ ಮಹಮ್ಮದ್ ಸಮ್ಮಾಸ್, ಗ್ರಂಥಾಲಯ ಮಂತ್ರಿಯಾಗಿ ರಮ್ಲತ್ ಬೀಬಿ ಮತ್ತು ಕೆ.ಹಶೀರ, ತೋಟಗಾರಿಕಾ ಮಂತ್ರಿಯಾಗಿ ಎಚ್.ಎಂ ಸಹಲಬತ್ ಮತ್ತು ಫಾಸೀಲ್, ಸಾಂಸ್ಕೃತಿಕ ಮಂತ್ರಿಯಾಗಿ ಝೈನಬ ವಫಿಯ್ಯ ಮತ್ತು ಸನಾ ಪಿ.ಎ ಆಯ್ಕೆಯಾದರು. ವಿರೋಧ ಪಕ್ಷದ ನಾಯಕನಾಗಿ ಮಹಮ್ಮದ್ ಸಬ್ರತ್‌ರನ್ನು ಆಯ್ಕೆಮಾಡಲಾಯಿತು.


ಶಾಲಾ ಮುಖ್ಯೋಪಾಧ್ಯಾಯರಾದ ಜಯಶ್ರೀ ಎಮ್.ರವರು ಮಂತ್ರಿಮಂಡಲ ರಚನೆ, ಅದರ ಉದ್ದೇಶ ಹಾಗೂ ಜವಾಬ್ದಾರಿಯನ್ನು ಮಕ್ಕಳಿಗೆ ತಿಳಿಸಿದರು. ಆಯ್ಕೆಗೊಂಡ ನೂತನ ಮಂತ್ರಿಮಂಡಲಕ್ಕೆ ಪ್ರಮಾಣವಚನ ಭೋದಿಸಿದರು. ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷರಾದ ಅಝೀಝ್ ಬಿ.ಕೆ. ಸಹಕರಿಸಿದರು.

LEAVE A REPLY

Please enter your comment!
Please enter your name here