ಅಧ್ಯಕ್ಷರಾಗಿ ನಾರಾಯಣ ಪ್ರಕಾಶ್ ಕೆ ಸತತ ಐದನೇ ಬಾರಿ ಪುನರಾಯ್ಕೆ- ಉಪಾಧ್ಯಕ್ಷರಾಗಿ ಉಮೇಶ್ ಬಲ್ಯಾಯ.ಕೆ ಆಯ್ಕೆ
ನಿಡ್ಪಳ್ಳಿ: ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಎಲ್ಲಾ ಹನ್ನೆರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗ 7 ಸ್ಥಾನಗಳಿಗೆ ನಾರಾಯಣ ಪ್ರಕಾಶ್.ಕೆ, ಕೆ.ಉದಯಕುಮಾರ್ ರೈ, ವಿದ್ಯಾ ಮಣ್ಣಂಗಳ, ವಿಶ್ವನಾಥ ರೈ.ಎಸ್, ವೆಂಕಟಕೃಷ್ಣ ಭಟ್.ಬಿ, ಎಸ್.ವಿ.ಶ್ರೀಧರ ಭಟ್, ಯತೀಶ್ ಕುಮಾರ್ ರೈ, ಹಿಂದುಳಿದ ವರ್ಗ ಎ ಮೀಸಲು ಒಂದು ಸ್ಥಾನಕ್ಕೆ ಉಮೇಶ್ ಬಲ್ಯಾಯ.ಕೆ, ಹಿಂದುಳಿದ ವರ್ಗ ಬಿ ಮೀಸಲು ಒಂದು ಸ್ಥಾನಕ್ಕೆ ಸಂತೋಷ್ ಕುಮಾರ್.ಜಿ, ಪರಿಶಿಷ್ಟ ಪಂಗಡ ಮೀಸಲು ಒಂದು ಸ್ಥಾನಕ್ಕೆ ಪದ್ಮಾವತಿ. ಎನ್ ಹಾಗೂ ಮಹಿಳಾ ಮೀಸಲು ಎರಡು ಸ್ಥಾನಕ್ಕೆ ಗುಲಾಬಿ ರೈ ಮತ್ತು ಸೀತಾ ಉಮೇದುವಾರಿಕೆ ಸಲ್ಲಿಸಿದ್ದರು. ಪ್ರತಿ ಸ್ಥಾನಕ್ಕೆ ತಲಾ ಒಂದೊಂದು ಉಮೇದುವಾರರು ನಾಮ ಪತ್ರ ಸಲ್ಲಿಸಿದ ಕಾರಣ ಚುನಾವಣೆ ನಡೆಯದೆ ಎಲ್ಲಾ ಸ್ಥಾನಗಳಿಗೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್ ಘೋಷಿಸಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಜೂ.14 ರಂದು ಸಂಘದ ಸಭಾ ಭವನದಲ್ಲಿ ನಡೆಯಿತು.ಅಧ್ಯಕ್ಷರಾಗಿ ದ.ಕ.ಹಾಲು ಒಕ್ಕೂಟದ ನಿರ್ದೇಶಕರೂ ಆಗಿರುವ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ಸತತ ಐದನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಉಮೇಶ್ ಬಲ್ಯಾಯ ಕೆ ಆಯ್ಕೆಯಾದರು.
ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್ ರವರ ನೇತೃತ್ವದಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಅಡಿಗ.ಎ ಮತ್ತು ಸಿಬ್ಬಂದಿಗಳು ಸಹಕರಿಸಿದರು.