ಪುತ್ತೂರು: ಒಡಿಸ್ಸಾದಲ್ಲಿ ನಡೆದ ಪ್ರಥಮ ವರ್ಷದ ರಾಷ್ಟ್ರಮಟ್ಟದ ಜನಜಾತಿಯ ಖೇಲ್ ಮಹೋತ್ಸವ-2023ರ ಪುರುಷರ ವಿಭಾಗದ ಖೋ-ಖೋ ಪಂದ್ಯಾಟದಲ್ಲಿ ಶಶಾಂಕ ಎನ್.ರವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಪದಕ ಪಡೆದುಕೊಂಡಿದ್ದಾರೆ.
ಶೇವಿರೆ ನಿವಾಸಿ ನೀಲಯ್ಯ ನಾಯ್ಕ್ ಎಂ. ಮತ್ತು ಬಿ. ಗೀತಾ ದಂಪತಿಯ ಪ್ರಥಮ ಪುತ್ರರಾದ ಇವರು ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಹಾಗೂ ಪುತ್ತೂರು ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾಗಿದ್ದಾರೆ.