ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

0

ಪುತ್ತೂರು: ಸ್ವಸ್ತಿಕ್ ಗೆಳೆಯರ ಬಳಗ ನೆಕ್ಕಿಲು ಇದರ ವತಿಯಿಂದ2022-2023 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಸರ್ವೆ ಕಲ್ಪನೆ ಸರಕಾರಿ ಪ್ರೌಢಶಾಲೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.


522 ಅಂಕ ಪಡೆದ ನಿಶ್ಮಿತಾ ಎಲಿಯ (ವೆಂಕಪ್ಪ ನಾಯ್ಕ ಎಲಿಯ ಹಾಗೂ ಉಮಾವತಿಯವರ ಪುತ್ರಿ) ಮತ್ತು 493 ಅಂಕ ಪಡೆದ ತೇಜಸ್ವಿನಿ ಸೊರಕೆ (ಪದ್ಮನಾಭ ಮತ್ತು ಹರಿಣಾಕ್ಷಿಯವರ ಪುತ್ರಿ) ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಲಿಖಿತಾ ನೆಕ್ಕಿಲು (ಚಂದ್ರಶೇಖರ ಹಾಗೂ ಪುಷ್ಪಾವತಿಯವರ ಪುತ್ರಿ) ಅವರನ್ನು ಅಭಿನಂದಿಸಲಾಯಿತು.


ಸಂಪನ್ಮೂಲ ವ್ಯಕ್ತಿಯಾಗಿ ವಿದೇಶಿ ಯುವ ಉದ್ಯಮಿ ರಜನಿಕಾಂತ್ ಬಾಲಾಯ ಅವರು ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹ ಧನ ನೀಡಿ ಗೌರವಿಸಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಹರೀಶ್ ವೈ ವಹಿಸಿದ್ದರು. ಸಂಘದ ಗೌರವಾಧ್ಯಕ್ಷರಾದ ಸುಂದರ ಬಲ್ಯಾಯ, ಗೌರವ ಸಲಹೆಗಾರರಾದ ತಿಮ್ಮಪ್ಪ ನಾಯ್ಕ, ಪದ್ಮಯ್ಯ ನಾಯ್ಕ, ಹಾಗೂ ಸದಸ್ಯರುಗಳಾದ ನಾರಾಯಣ ಬಲ್ಯಾಯ ಜಗನ್ನಾಥ ಬಾಲಾಯ ಸುಬ್ರಹ್ಮಣ್ಯ ಶರತ್, ಶರತ್ ಎನ್, ಹೇಮಚಂದ್ರ, ಬಾಲಚಂದ್ರ, ಪ್ರದೀಪ್, ದೀಕ್ಷಿತ್ ಬಲ್ಯಾಯ ಪುರುಷೋತ್ತಮ ಆಚಾರ್ಯ, ನವೀನ್ ನೆಕ್ಕಿಲು, ನಿಶಾಂತ್, ಲಿಖಿತ್, ಚೇತನ್, ಮೋಕ್ಷಿತ್ ಬಲ್ಯಾಯ ಹಾಗೂ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ರೇಖಾ ರೈ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಸುಂದರ ಬಲ್ಯಾಯ ಸ್ವಾಗತಿಸಿದರು. ಕೃತಿ ಬಲ್ಯಾಯ ಪ್ರಾರ್ಥಿಸಿದರು. ದೀಕ್ಷಿತ್ ಬಲ್ಯಾಯ ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳ ಪರಿಚಯಮಾಡಿ ವಂದಿಸಿದರು. ನವೀನ್ ಎನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here