ಕಬಕ; ಪಾರ್ಕ್ ಮಾಡಿದ್ದ ಸ್ಕೂಟರ್ ಬಾಕ್ಸ್‌ನಿಂದ ಸಾವಿರಾರು ರೂ ನಗದು ಕಳವು-ಸಿಸಿ ಕ್ಯಾಮರದಲ್ಲಿ ಕಳವು ಮಾಡುತ್ತಿರುವ ದೃಶ್ಯ ಸೆರೆ

0

ಪುತ್ತೂರು: ರಾತ್ರಿ ಹೊತ್ತು ಕಬಕದಲ್ಲಿ ಪಾರ್ಕ್ ಮಾಡಲಾದ ಸ್ಕೂಟರ್‌ವೊಂದರ ಬಾಕ್ಸ್‌ನಿಂದ ಸಾವಿರಾರು ರೂಪಾಯಿ ನಗದು ಕಳವು ಮಾಡಿದ ಘಟನೆ ಜೂ. 19ರಂದು ರಾತ್ರಿ ನಡೆದಿದೆ. ಘಟನೆ ಕುರಿತು ಸಿಸಿ ಕ್ಯಾಮರದಲ್ಲಿ ಕಳವು ಮಾಡುತ್ತಿರುವ ದೃಶ್ಯ ಸೆರೆಯಾಗಿದೆ.


ವಿಟ್ಲ ನಿವಾಸಿ ತಿಲಕ್ ಎಂಬವರ ಸ್ಕೂಟರ್‌ನಿಂದ ರೂ. 23ಸಾವಿರ ನಗದು ಕಳವಾಗಿದ್ದು, ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಿಲಕ್ ಅವರು ಸುದ್ದಿ ಬಿಡುಗಡೆ ಪತ್ರಿಕೆಯ ಮಂಗಳೂರಿನ ಮುದ್ರಣಾಲಯಕ್ಕೆ ತೆರಳಲು ಕಬಕದಲ್ಲಿ ಸ್ಕೂಟರ್ ಅನ್ನು ಶ್ರೀಮಾತಾ ಇನ್‌ಶ್ಯೂರೆನ್ಸ್ ಸಂಸ್ಥೆಯ ಪಕ್ಕದಲ್ಲಿ ಜೂ. 19ರ ರಾತ್ರಿ 9.30ಕ್ಕೆ ಪಾರ್ಕ್ ಮಾಡಿದ್ದರು. ಮಂಗಳೂರಿಗೆ ತೆರಳಿ ರಾತ್ರಿ ಬಂದಾಗ ಸ್ಕೂಟರ್‌ನಿಂದ ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಅವರು ಪಕ್ಕದ ಸಂಸ್ಥೆಯಿಂದ ಸಿಸಿ ಕ್ಯಾಮರ ಪರಿಶೀಲಿಸಿದಾಗ ಯುವಕನೋರ್ವ ರಾತ್ರಿ ಸುಮಾರು 10.40 ಗಂಟೆಗೆ ಸ್ಕೂಟರ್‌ನ ಸೀಟ್ ಅನ್ನು ಬಲತ್ಕಾರವಾಗಿ ಬೆಂಡ್ ಮಾಡಿ ನಗದು ಕಳವು ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here