ಬೆಟ್ಟಂಪಾಡಿ ಕಾಲೇಜಿನಲ್ಲಿ ಅಂ. ಯೋಗ ದಿನಾಚರಣೆ – ವಿಚಾರ ಸಂಕಿರಣ

0

ಯೋಗವು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ: ಹರಿಪ್ರಸಾದ್ ಎಸ್

ಬೆಟ್ಟಂಪಾಡಿ: ಯೋಗವು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ. ಯೋಗದಿಂದ ಮನುಷ್ಯನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹರಿಪ್ರಸಾದ್ ಎಸ್. ಹೇಳಿದರು. ಇವರು ಕಾಲೇಜಿನ  ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಹಾಗೂ ಐ ಕ್ಯೂ ಎ ಸಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆಯೋಜಿಸಿದ ವಿದ್ಯಾರ್ಥಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಯಶಸ್ವಿ ವ್ಯಕ್ತಿಗಳ ಯಶಸ್ಸಿನ ಗುಟ್ಟು ಯೋಗಭ್ಯಾಸ ಆಗಿದ್ದು ಇಡೀ ಪ್ರಪಂಚವೇ ಯೋಗದತ್ತ ಮುಖ ಮಾಡಿದೆ. ಖಿನ್ನತೆ, ಮಧುಮೇಹ, ಅಧಿಕ ರಕ್ತದೊತ್ತಡ, ಅಸ್ತಮಾ ಮುಂತಾದ ಸಮಸ್ಯೆಗಳಿಗೆ ಯೋಗ ದಲ್ಲಿ ಪರಿಹಾರವಿದ್ದು  ನಿರಂತರ ಯೋಗಾಭ್ಯಾಸ ಆಧುನಿಕ ಜೀವನದಲ್ಲಿ ಅನಿವಾರ್ಯವಾಗಿದೆ. ಆದ್ದರಿಂದ, ಯೋಗವನ್ನು ಕೇವಲ ಒಂದು ದಿನಕ್ಕೆ ಸೀಮಿತವಾಗಿರಿಸದೆ, ಪ್ರತಿದಿನವೂ ಅಭ್ಯಸಿಸಿ ಸ್ವಸ್ಥ ಸಮಾಜದ ನಿರ್ಮಾಣವಾಗಬೇಕು ಎಂದು ಹೇಳಿದರು.

ಸ್ವಯಂಸೇವಕರಾದ ಸಾರ್ಥಕ್ ಟಿ, ತೃತೀಯ ಬಿಕಾಂ; ಕಿರಣ್ ಕೆ, ದ್ವಿತೀಯ ಬಿಕಾಂ; ಕವಿತಾ ಎಸ್ ಪೈ, ತೃತೀಯ ಬಿಕಾಂ; ಅನನ್ಯ ಎಸ್, ದ್ವಿತೀಯ ಬಿಕಾಂ; ಶಿಲ್ಪಾ ಎಸ್ ಎ, ಪ್ರಥಮ ಬಿಕಾಂ ಮತ್ತು ಆದರ್ಶ ಏನ್, ದ್ವಿತೀಯ ಬಿಕಾಂ ಇವರು ‘ದೈನಂದಿನ ಜೀವನದಲ್ಲಿ ಯೋಗದ ಮಹತ್ವ’ ಎಂಬ ವಿಷಯದ ಬಗ್ಗೆ ವಿಚಾರವನ್ನು ಮಂಡಿಸಿದರು. ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇನ್ನೋರ್ವ ಎನ್ಎಸ್ಎಸ್ ಅಧಿಕಾರಿ ಶಶಿಕುಮಾರ, ಘಟಕ ನಾಯಕರುಗಳು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಘಟಕ ನಾಯಕ ನಿತ್ಯಾನಂದ ಬಿ, ದ್ವಿತೀಯ ಬಿಕಾಂ. ನಿರ್ವಹಿಸಿದರು.

LEAVE A REPLY

Please enter your comment!
Please enter your name here