ರಾಮಕುಂಜ: ಯೋಗಶಾಸ್ತ್ರವು ಭಾರತದ ಯೋಗಿಗಳ ದಿವ್ಯ ದರ್ಶನ. ಇದು ಚಿತ್ತವೃತ್ತಿ ನಿರೋಧವನ್ನು ಹೇಳುತ್ತದೆ. ಅಷ್ಟಾಂಗ ಸಹಿತ ಯೋಗವನ್ನು ಆಚರಣೆ ಮಾಡುವುದರಿಂದ ವ್ಯಕ್ತಿಯ ಅಂತರಂಗ ಬಹಿರಂಗಗಳನ್ನು ಶುದ್ಧಗೊಳಿಸಲು ಸಾಧ್ಯವಿದೆ. ಯುವ ಜನತೆ ಯೋಗದ ಮಹತ್ವವನ್ನು ಅರಿತು ಮುನ್ನಡೆಯನ್ನು ಸಾಧಿಸಬೇಕು ಎಂದು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಗಣರಾಜ ಕುಂಬ್ಳೆ ಹೇಳಿದರು.
ಅವರು ಕಾಲೇಜಿನಲ್ಲಿ ನಡೆದ ಒಂಬತ್ತನೆಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿರಿತನವಹಿಸಿ ಮಾತನಾಡುತ್ತಿದ್ದರು. ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಯೋಗ ದಿನಾಚರಣೆಯ ಮಾರ್ಗಸೂಚಿಯಂತೆ ಯೋಗಾಸನ ಪ್ರಾಣಾಯಾಮಾದಿಗಳನ್ನು ನಡೆಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ರವರು ಯೋಗ ಮಾರ್ಗದರ್ಶನ ನೀಡಿ ಪ್ರಾತ್ಯಕ್ಷಿಕೆಗಳನ್ನು ಮಾಡಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ಕ್ರಾಸ್ ಘಟಕ ಕಾರ್ಯಕ್ರಮವನ್ನು ಸಂಘಟಿಸಿತ್ತು. ಮಂಗಳೂರು ವಿ.ವಿ. ಸಂಘಟಿಸಿದ ರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ ಕುಮಾರಿ ಶ್ರದ್ಧಾ ಅವರನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಯೋಗ ದಿನಾಚರಣೆಯ ಸಂದೇಶವನ್ನು ಕುಮಾರಿ ಶ್ರದ್ಧಾ ಯು. ಎಸ್. ವಾಚಿಸಿದರು. ಕಾಲೇಜಿನ ಉಪನ್ಯಾಸಕ ಜಯಶ್ರೀ, ಕೃಷ್ಣಪ್ರಸಾದ್, ಶಿವಪ್ರಸಾದ್ ಹಾಗೂ ದಿವಾಕರ್ ಉಪಸ್ಥಿತರಿದ್ದರು.