ಪೆರಾಬೆ: ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಕುಂತೂರು ಮಾರ್ ಇವಾನಿಯೋಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ’ಬೀಜ ಬಿತ್ತೋಣ-ಅರಣ್ಯ ಬೆಳೆಸೋಣ’ ಕಾರ್ಯಕ್ರಮ ನಡೆಯಿತು.
ಶಾಲೆಯ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಅಧಿಕಾರಿ ಜಯಕುಮಾರ್ ಅವರು ಮಕ್ಕಳಿಗೆ ಅರಣ್ಯ ಉಳಿಸುವ ಹಾಗೂ ಗಿಡ ಮರ ಬೆಳೆಸುವ ಬಗ್ಗೆ ಮಾಹಿತಿ ನೀಡಿದರು. ಶಾಲಾ ಉಪಮುಖ್ಯಮಂತ್ರಿ ಸಿ.ಸ್ಟೆಫಿ ತೋಮಸ್ರವರು ಅರಣ್ಯ ಇಲಾಖೆ ಕೊಡಮಾಡಿದ ಸಸಿಯನ್ನು ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳು ಪರಂಕಾಜೆ ಎಂಬಲ್ಲಿಗೆ ತೆರಳಿ ಮಾವು, ಹಲಸು, ನೇರಳೆ ಇತ್ಯಾದಿ ಮರಗಳ ಬೀಜಗಳನ್ನು ಅರಣ್ಯ ಅಧಿಕಾರಿ ಜಯಕುಮಾರ್ರವರ ನಿರ್ದೇಶನದಂತೆ ಬಿತ್ತಿದರು. ಅರಣ್ಯ ರಕ್ಷಕರಾದ ರವಿಕುಮಾರ್, ಬಾಲಚಂದ್ರ ಗೌಡ, ಬಾಬಣ್ಣ ಸಹಕರಿಸಿದರು. ಸಹಶಿಕ್ಷಕರಾದ ಶಾಜನ್ ತೋಮಸ್, ಸವಿತರವರು ಸಹಕರಿಸಿದರು.