ನಗರಸಭೆ ವ್ಯಾಪ್ತಿಯ ಚರಂಡಿ ಕಾಮಗಾರಿಯನ್ನು ತುರ್ತಾಗಿ ನಿರ್ವಹಿಸಲು ಬಿಜೆಪಿ ಸದಸ್ಯರಿಂದ ಪೌರಾಯುಕ್ತರಿಗೆ ಮನವಿ

0

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ಎಲ್ಲಾ ವಾರ್ಡ್ ಗಳಲ್ಲಿ ಚರಂಡಿಗಳನ್ನು ಕೂಡಲೇ ದುರಸ್ತಿ ಪಡಿಸಬೇಕು ಮತ್ತು ನಿಧಾನಗತಿಯಲ್ಲಿ ನಡೆಯುತ್ತಿರುವ ಟೆಂಡರ್ ಕರೆದಿರುವ ಕಾಮಗಾರಿಗಳನ್ನು ತುರ್ತಾಗಿ ನಿರ್ವಹಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಬೇಕೆಂದು ನಗರಸಭೆಯ ಬಿಜೆಪಿ ಸದಸ್ಯರು ಜೂ.22 ರಂದು ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿರುವ ಮಳೆ ನೀರು ಹರಿದು ಹೋಗುವ ಚರಂಡಿಯ ಹೂಳೆತ್ತುವ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಇದರ ಜೊತೆಗೆ ಟೆಂಡರ್ ಕೆರೆದಿರುವ ಕಾಮಗಾರಿಗಳು ಕೂಡಾ ನಿಧಾನಗತಿಯಲ್ಲಿ ನಡೆಯುತ್ತಿದೆ. ಕಸ ವಿಲೇವಾರಿಯೂ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಈ ಕುರಿತು ನಮಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದೆ ಎಂದು ನಗರಸಬೆ ಸದಸ್ಯ ಕೆ.ಜೀವಂಧರ್ ಜೈನ್ ಅವರು ಪೌರಾಯುಕ್ತರಿಗೆ ತಿಳಿಸಿದ್ದಾರೆ. ಈ ಸಂದರ್ಭ ನಗರಸಭೆ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಭಾಮಿ ಅಶೋಕ್ ಶೆಣೈ, ಸಂತೋಷ್, ಮನೋಹರ್ ಕಲ್ಲಾರೆ, ಸುಂದರ ಪೂಜಾರಿ ಬಡಾವು ಸಹಿತ ಇತರ ಸದಸ್ಯರು ಸಮಸ್ಯೆಗಳ ಕುರಿತು ಪೌರಾಯುಕ್ತರಿಗೆ ಮನವರಿಕೆ ಮಾಡಿದರು. ಸದಸ್ಯರಾದ ಗೌರಿ ಬನ್ನೂರು, ಮೋಹಿನಿ ವಿಶ್ವನಾಥ್, ನವೀನ್ ಪೆರಿಯತ್ತೋಡಿ, ಪ್ರೇಮಲತಾ ನಂದಿಲ, ಪ್ರೇಮ್ ಕುಮಾರ್, ಪದ್ಮನಾಭ ನಾಯ್ಕ್, ಲೀಲವತಿ, ಶೀನಪ್ಪ ನಾಯ್ಕ್, ಇಂದಿರಾ ಆಚಾರ್ಯ, ಮಮತಾರಂಜನ್, ಪೂರ್ಣಿಮಾ ಮತ್ತು ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದುರ್ಗಾಪ್ರಸಾದ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here