ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘ ರಚನೆ

0

ವಿದ್ಯಾರ್ಥಿ ಸಂಘದ ಆಡಳಿತವು ಕಿರಿಯ ವಿದ್ಯಾರ್ಥಿಗಳಿಗೂ ಮಾದರಿಯಾಗಲಿ – ವಿಜಯಕುಮಾರ್. ಎಸ್ 

ಬೆಟ್ಟಂಪಾಡಿ: ಇಲ್ಲಿನ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಜೂ. 10 ರಂದು ಚುನಾವಣೆ ನಡೆಯಿತು. ಶಾಲಾ ನಾಯಕನಾಗಿ ಹೇಮಂತ ಕುಮಾರ್ ಕೆ. ವೈ (10ನೇ ತರಗತಿ) ಉಪನಾಯಕನಾಗಿ ಆಯುಷ್ ರೈ (7ನೇ ತರಗತಿ )ಕಾರ್ಯದರ್ಶಿಯಾಗಿ ಶ್ರೀಕಂಠ ಪೂಜಾರಿ (9ನೇ ತರಗತಿ) ಜೊತೆ ಕಾರ್ಯದರ್ಶಿಯಾಗಿ ಅದ್ವಿತ್ ರಾಜ್ ಎಸ್ .ಕೆ (8ನೇ ತರಗತಿ) ಆಯ್ಕೆಯಾದರು. ಉಳಿದಂತೆ ಸಾಂಸ್ಕೃತಿಕ ಮಂತ್ರಿಯಾಗಿ ತನ್ವಿ ಶೆಟ್ಟಿ ( 9ನೇ ತರಗತಿ )ಆಹಾರ ಮಂತ್ರಿಯಾಗಿ ಚಿಂತನ್ ರೈ( 9ನೇ ತರಗತಿ) ಶಿಕ್ಷಣ ಮಂತ್ರಿಯಾಗಿ ಶರಣ್ಯ (9ನೇ ತರಗತಿ) ಕೃಷಿ ಮಂತ್ರಿಯಾಗಿ ಹರ್ಷಿತ್ ಪೂಜಾರಿ (9ನೇ ತರಗತಿ) ನೀರಾವರಿ ಮಂತ್ರಿಯಾಗಿ, ವೀಕ್ಷ ಕೆ. (9ನೇ ತರಗತಿ) ಕ್ರೀಡಾಮಂತ್ರಿಯಾಗಿ ಅನ್ವಿತಾ ರೈ (9ನೇ ತರಗತಿ) ಆರೋಗ್ಯ ಮಂತ್ರಿಯಾಗಿ ಕುಲದೀಪ್ .ಎನ್ .ಗೌಡ (8ನೇ ತರಗತಿ) ಆಯ್ಕೆಯಾದರು. 

ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿ ಇಲ್ಲಿನ ಮುಖ್ಯ ಗುರು ವಿಜಯಕುಮಾರ್  ಎಸ್. ರವರು ನೂತನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ‘ಹಿರಿಯ ನಾಯಕರುಗಳಾದ ಸುಭಾಷ್ ಚಂದ್ರಬೋಸ್, ಅಬ್ದುಲ್ ಕಲಾಂ ಹಾಗೂ ನಮ್ಮ ಪ್ರಧಾನಿಯವರಂತಹ ಆಡಳಿತ ನಿಮ್ಮ ಕೈಯಿಂದಲೂ ಮೂಡಿಬರಲಿ ನಿಮ್ಮ ಆಡಳಿತ ಕಿರಿಯ ವಿದ್ಯಾರ್ಥಿಗಳಿಗೂ ಮಾದರಿಯಾಗಲಿ ಎಂದು ಶುಭ ಹಾರೈಸಿದರು. ಚುನಾವಣಾ ಅಧಿಕಾರಿ ಪ್ರಶಾಂತ್ ಎನ್., ಮುಖ್ಯಗುರು ರಾಜೇಶ್ ಎನ್. ಹಾಗೂ ಬೋಧಕ ಬೋಧಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪದಾಧಿಕಾರಿಗಳನ್ನು ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ಅಭಿನಂದಿಸಿದರು.

LEAVE A REPLY

Please enter your comment!
Please enter your name here