ಇಂದು ನಾಳೆ ಎಪಿಸೋಡ್ ಪ್ರಸಾರ
ಕಡಬ: ಝೀ ಕನ್ನಡ ವಾಹಿನಿಯಲ್ಲಿ ಹತ್ತು ವರ್ಷಗಳ ಬಳಿಕ ಪ್ರಾರಂಭಗೊಂಡ ಮಕ್ಕಳ ನಂ.1 ಗೇಮ್ ಶೋ ಛೋಟಾ ಚಾಂಪಿಯನ್‌ನಲ್ಲಿ ರಾಮಕುಂಜ ಗ್ರಾಮದ ಸುಜಿತ್ ಎಸ್. ಇವರ ಪುತ್ರಿ ಆತ್ಮಿ ಗೌಡ ಎಸ್. (3.11 ವರ್ಷ) ಆಯ್ಕೆಯಾಗಿದ್ದು, ಇವರು ಪಾಲ್ಗೊಂಡಿರುವ ಶೋ ಜೂ. 24 ಮತ್ತು ಜೂ.25ರಂದು ಸಂಜೆ 6 ಗಂಟೆಗೆ ಪ್ರಸಾರಗೊಳ್ಳಲಿದೆ.

ಹತ್ತು ವರ್ಷಗಳ ಹಿಂದೆ ಸೃಜನ್ ಲೋಕೇಶ್ ನಿರ್ವಹಿಸುತ್ತಿದ್ದ ಮಕ್ಕಳ ಗೇಮ್ ಶೋ ಕಾರ್ಯಕ್ರಮದ ನಿರೂಪಣೆಯನ್ನು ಈ ಬಾರಿ ಕುರಿ ಪ್ರತಾಪ್ ಮತ್ತು ಶ್ವೇತಾ ಚಂಗಪ್ಪ ನಡೆಸಿಕೊಡುತ್ತಿದ್ದು ಇದರಲ್ಲಿ 2ರಿಂದ 6 ವರ್ಷದ ಮಕ್ಕಳು ಭಾಗವಹಿಸಬಹುದಾಗಿದೆ. ಬೆಂಗಳೂರಿನಲ್ಲಿ ನಡೆದ ಆಡಿಷನ್‌ನಲ್ಲಿ ಆಯ್ಕೆಯಾಗಿದ್ದ ಆತ್ಮಿ ಗೌಡ ಬಳಿಕ 3 ಸುತ್ತಿನ ಆಡಿಷನ್‌ನ ನಂತರ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ.

ಕಡಬ ತಾಲೂಕಿನ ರಾಮಕುಂಜದ ಸಂಪ್ಯಾಡಿ ನಿವಾಸಿಯಾಗಿರುವ ಸುಜಿತ್ ಎಸ್ ಮತ್ತು ಉಮಾಶ್ರೀ ಪಿ.ಬಿ. ಯವರ ಪುತ್ರಿಯಾಗಿರುವ ಆತ್ಮಿ ಗೌಡ ಎಸ್. ಇವರು ಸಂಪ್ಯಾಡಿಯ ಜೋಗಪ್ಪ ಗೌಡ ಮತ್ತು ಚಂದ್ರಾವತಿ ದಂಪತಿಯ ಮೊಮ್ಮಗಳು.

ಛೋಟಾ ಚಾಂಪಿಯನ್ ವೇದಿಕೆಯಲ್ಲಿ ಈ ಬಾರಿ ಬೆಂಗಳೂರು ಬಾಯ್ಸ್ ಚಿತ್ರತಂಡ:
ಈ ಬಾರಿ ಛೋಟಾ ಚಾಂಪಿಯನ್ ವೇದಿಕೆಯಲ್ಲಿ ಬೆಂಗಳೂರು ಬಾಯ್ಸ್ ಚಿತ್ರತಂಡದವರು ಅತಿಥಿಗಳಾಗಿ ಭಾಗವಹಿಸಿದ್ದರು. ಚಿತ್ರ ತಂಡದವರು ಮಕ್ಕಳೊಂದಿಗೆ ಬೆರೆತು, ಅವರಿಗೆ ಶುಭ ಹಾರೈಸಿದರು. ಚಿತ್ರ ತಂಡದವರಾದ ಅಭಿಷೇಕ್ ರಾಮ್‌ದಾಸ್, ಚಂದನ್ ಆಚಾರ್, ರೋಹಿತ್ ಭಾನುಪ್ರಕಾಶ್, ವೈನಿಧಿ ಜಗದೀಶ್, ಸೋನಿ, ಧರ್ಮವಿಶ್, ವಿಕ್ರಮ್ ಯೆಲೈಹ್ ಮತ್ತಿತರರು ಉಪಸ್ಥಿತರಿದ್ದರು.