ಜೂ.25 : ಶಾಸಕರಿಂದ ಸವಣೂರಿನಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ

0

ಸವಣೂರು : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸವಣೂರು ಗ್ರಾಮದಲ್ಲಿ ಮಾ.25ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ  ಆರೇಲ್ತಡಿ ಕಿ.ಪ್ರಾ ಶಾಲೆ ಭೇಟಿ, ಸಂಜೆ ಮಾಲೆತ್ತಾರು ಕಾಂಕ್ರೀಟ್ ರಸ್ತೆ ಉದ್ಘಾಟನೆ , ಬೇರಿಕೆ- ಕೊಡಿಬೈಲು ಕಾಂಕ್ರೀಟ್ ರಸ್ತೆ ಉದ್ಘಾಟನೆ, ಬೇರಿಕೆ-ಬಾರಿಕೆ ಕಾಂಕ್ರೀಟ್ ರಸ್ತೆ ಉದ್ಘಾಟನೆ ,ಇಡ್ಯಾಡಿ ಕಾಂಕ್ರೀಟ್ ರಸ್ತೆ ಉದ್ಘಾಟನೆ , ಮುಗೇರು ಕಾಯರ್ಗ  ಕಾಂಕ್ರೀಟ್ ರಸ್ತೆ ಉದ್ಘಾಟನೆ ,ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಕ್ಕೆ  ಭೇಟಿ ನೀಡುವರು.

ಬಳಿಕ  ಸವಣೂರಿನಲ್ಲಿ ಸೋಲಾರ್ ದೀಪಗಳ ಲೋಕಾರ್ಪಣೆ ಮಾಡಿ ಸವಣೂರು ಯುವ ಸಭಾಭವನದಲ್ಲಿ ನಡೆಯುವ  ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸುಳ್ಯ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here