ಪುತ್ತೂರು: ಮೇನಾಲ ಸ.ಉ.ಹಿ.ಪ್ರಾ.ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು. ಶಿಕ್ಷಣ ಸಂಯೋಜಕರಾದ ಅಮೃತಕಲಾ, ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತಿ ಯೋಗದ ಮಹತ್ವದ ಬಗ್ಗೆ ವಿವರಿಸಿದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ಲ ಮೆಣಸಿನಕಾನ ಶುಭ ಹಾರೈಸಿದರು. ಎಸ್ಡಿಎಂಸಿ ಉಪಾಧ್ಯಕ್ಷೆ ಮನೋರಮಾ ಉಪಸ್ಥಿತರಿದ್ದರು.ಶಾಲಾ ಪ್ರಭಾರ ಮುಖ್ಯಶಿಕ್ಷಕಿ ರೇವತಿ ಕೆ ಸ್ವಾಗತಿಸಿ ಮಾತನಾಡಿದರು. ಶಿಕ್ಷಕಿ ವಾಣಿ ಕೆ ಯೋಗಾಸನ ಕಾರ್ಯಕ್ರಮ ನೆರವೇರಿಸಿದರು. ಶಿಕ್ಷಕಿಯರಾದ ಲತಾ, ಆಶಾ, ಪೂರ್ಣಿಮಾ ಸಹಕರಿಸಿದರು.