960.46 ಕೋಟಿ ರೂ., ವ್ಯವಹಾರ; ರೂ.180.43 ಲಕ್ಷ ನಿವ್ವಳ ಲಾಭ, ಶೇ.10 ಡಿವಿಡೆಂಡ್ ಘೋಷಣೆ
ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022 -23 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ದೀನ ದಯಾಳ್ ರೈತ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಅವರ ಅಧ್ಯಕ್ಷತೆಯಲ್ಲಿ ಜೂ.24ರಂದು ನಡೆಯಿತು.
ವರ್ಷದ ಕೊನೆಗೆ ಸಂಘವು 81.17 ಕೋಟಿ ರೂ.ಠೇವಣಿ ಹೊಂದಿದ್ದು 116.98 ಕೋಟಿ ರೂ.,ಸಾಲ ವಿತರಿಸಲಾಗಿದೆ. ವಿತರಿಸಿದ ಸಾಲದ ಹೊರಬಾಕಿ 125.35 ಕೋಟಿ ರೂ., ಇದೆ. ವಿತರಿಸಿದ ಸಾಲದ ಪೈಕಿ ಶೇ.98.70 ವಸೂಲಾಗಿರುತ್ತದೆ. ಸಂಘವು ಒಟ್ಟು 960.46 ಕೋಟಿ ರೂ. ವಾರ್ಷಿಕ ವ್ಯವಹಾರ ಮಾಡಿದ್ದು 180.43 ಲಕ್ಷ ರೂ. ಲಾಭಗಳಿಸಿದೆ ಎಂದು ಅಧ್ಯಕ್ಷ ಧರ್ಮಪಾಲ ರಾವ್ ಕಜೆ ತಿಳಿಸಿದರು.
ಆಲಂಕಾರಿನಲ್ಲಿರುವ ಸಂಘದ ಪ್ರಧಾನ ಕಚೇರಿ, ಕೊಯಿಲ, ಕುಂತೂರು ಶಾಖೆಗಳಲ್ಲಿ ಉತ್ತಮ ಗುಣಮಟ್ಟದ ದಿನಸಿ ಸಾಮಾಗ್ರಿಗಳ ಮಾರಾಟ ಮಾಡಲಾಗುತ್ತಿದೆ.
ರಾಸಾಯನಿಕ ಗೊಬ್ಬರ ಎಲ್ಲಾ ಕೃಷಿಕರಿಗೆ ಸಿಗುವಂತೆ ಮಾಡಲು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ ಎಂದು ಹೇಳಿದರು. ಸಂಘದ ಕಾರ್ಯ ವ್ಯಾಪ್ತಿಯ
ಹಳೆನೇರೆಂಕಿಯಲ್ಲಿ ಜಾಗ ಖರೀದಿ ಮಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿ ಯಲ್ಲಿದ್ದು ಪ್ರಸಕ್ತ ಸಾಲಿನಲ್ಲಿ ಉದ್ಘಾಟನೆಗೊಳ್ಳಲಿದೆ ರೈತ ಸದಸ್ಯರ ಅವಶ್ಯಕತೆ ಮನಗಂಡು ಸಂಘದ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದೊಂದಿಗೆ ನೆಫ್ಟ್/ ಆರ್.ಟಿ.ಜಿ.ಎಸ್ ಸೌಲಭ್ಯವನ್ನು ನೀಡಲಾಗಿದೆ. ಸೋಲಾರ್ ವಿದ್ಯುತ್ ಉಪಕರಣ ಅಳವಡಿಸಿಕೊಳ್ಳಲು ದೀರ್ಘಾವಧಿ ಸಾಲದ ವ್ಯವಸ್ಥೆ, ಮದುವೆ ಹಾಗೂ ಇತರ ಸಮಾರಂಭಗಳಿಗೆ ಸುಸಜ್ಜಿತವಾದ ರೈತ ಸಭಾಭವನ, ರೈತಾಪಿ ವರ್ಗದ ಅನುಕೂಲತೆಗಾಗಿ ನ್ಯಾಯಯುತ ಬಾಡಿಗೆ ದರದಲ್ಲಿ ಪಿಕ್ಅಪ್ ವಾಹನ ಸೌಲಭ್ಯ, ಕಾಳುಮೆಣಸು ಬೇರ್ಪಡಿಸುವ ಯಂತ್ರ ಕೂಡ ಬಾಡಿಗೆ ದೊರೆಯುತ್ತದೆ. ಸಾಲಗಾರ ಸದಸ್ಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುವರ್ಣ ಸಹಕಾರಿ ನಿಧಿಯನ್ನು ಅನುಷ್ಠಾನ ಮಾಡಲಾಗಿದ್ದು 4 ಅರ್ಹ ಸಾಲಗಾರ ರೈತ ಸದಸ್ಯರು 47000 ಪರಿಹಾರ ಪಡೆದು ಕೊಂಡಿರುತ್ತಾರೆ ಎಂದು ತಿಳಿಸಿದರು.
ಶೇ.10 ಡಿವಿಡೆಂಡ್:
2022 -23ನೇ ಸಾಲಿನಲ್ಲಿ ಸಂಘವು ಅತ್ಯಧಿಕ ಲಾಭ ಪಡೆದುಕೊಂಡಿರುವುದಕ್ಕೆ ಸಂಘದ ಅಡಳಿತ ಮಂಡಳಿ ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.9 % ಡಿವಿಡೆಂಡ್ ಹಾಗೂ ಸಿಬ್ಬಂದಿಗಳಿಗೆ 2 ತಿಂಗಳ ವೇತನವನ್ನು ಬೋನಸ್ ಆಗಿ ನೀಡಲಾಗುವುದು ಎಂದು ಅಧ್ಯಕ್ಷ ಧರ್ಮಪಾಲ ರಾವ್ರವರು ಸಭೆಗೆ ತಿಳಿಸಿದರು. ಸಂಘವು ಅತೀ ಹೆಚ್ಚು ಲಾಭ ಪಡೆದ ಹಿನ್ನಲೆಯಲ್ಲಿ ಹೆಚ್ಚು ಡಿವಿಡೆಂಡ್ ನೀಡಬೇಕೆಂದು ಸಂಘದ ಸದಸ್ಯರಾದ ಜನಾರ್ದನ ಬಿ.ಎಲ್ ಪ್ರಶಾಂತ ರೈ ಮನವಳಿಕೆ.ಹೇಳಿದರು. ಇದಕ್ಕೆ ಇತರೇ ಸದಸ್ಯರೂ ಧ್ವನಿಗೂಡಿಸಿದರು. ಈ ಬಗ್ಗೆ ಚರ್ಚೆ ನಡೆದು ಹಳೆನೇರೆಂಕಿಯಲ್ಲಿ ನೂತನ ಕಟ್ಟಡ ನಿರ್ಮಾಣ ಗೊಳ್ಳುವ ಉದ್ದೇಶದಿಂದ ಎಲ್ಲಾರೂ ಸಹಕರಿಸಬೇಕು ಎಂದು ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ತಿಳಿಸಿದರು ಅದಕ್ಕೆ ಸಂಘದ ಸದಸ್ಯ ಜನಾರ್ಧನಾ ಕದ್ರ ಹಳೆನೇರೆಂಕಿಯಲ್ಲಿ ನೂತನ ಕಟ್ಟಡ ನಿರ್ಮಾಣವಾಗುವುದಕ್ಕೆ ಸಂಘದ ಸದಸ್ಯರೆಲ್ಲರ ಸಹಕಾರ ಬೇಕು ಎಂದು ವಿನಂತಿಸಿದರು. ಅಂತಿಮವಾಗಿ ಚರ್ಚೆ ನಡೆದು 10% ಡಿವಿಡೆಂಡ್ ನೀಡುವುದಾಗಿ ಅಧ್ಯಕ್ಷರು ಘೋಷಣೆ ಮಾಡಿದರು.
ಎಲ್ಲಾ ದಿನವೂ ದಿನಸಿ ಸಾಮಾಗ್ರಿ ವ್ಯಾಪಾರ ಮಾಡಿ:
ಸಂಘದ ಸದಸ್ಯರಾದ ಪೂವಪ್ಪ ನಾಯ್ಕ್ ಎಸ್.,ಅವರು ಮಾತನಾಡಿ, ಪ್ರಧಾನ ಕಚೇರಿ, ಕೊಯಿಲ ಹಾಗೂ ಕುಂತೂರು ಶಾಖೆಗಳಲ್ಲಿ ವಾರದ ಏಳು ದಿನವೂ ಬೆಳಿಗ್ಗೆ 8ರಿಂದ ಸಂಜೆ 7 ಗಂಟೆಯವರೆಗೆ ದಿನಸಿ ಮಾರಾಟ ಮಾಡಬೇಕೆಂದು ಹೇಳಿದರು. ಈ ಬಗ್ಗೆ ಅಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದೆಂದು ತಿಳಿಸಿದರು.
ಫಸಲ್ ಭೀಮಾ ಯೋಜನೆಯನ್ನು ಸ್ಥಗಿತಗೊಳಿಸಬೇಡಿ ಹಾಗು ಯಶಸ್ವಿನಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಿ ಸಭೆಯಲ್ಲಿ ಕೃಷಿಕರ ಅಗ್ರಹ
ಕೇಂದ್ರ ಸರಕಾರದ ಹವಾಮಾನ ಆಧಾರಿತ ಬೆಳೆ ವಿಮೆ ಫಸಲ್ ಭೀಮಾ ಯೋಜನೆಗೆ ರಾಜ್ಯದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಸರಕಾರ ಕೋಕ್ ನೀಡಲು ನಿರ್ಧರಿಸಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದ್ದು ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಕೈಬಿಡಬಾರದು ಎಂದು ಸಂಘದ ಸದಸ್ಯರು ಅಗ್ರಹಿಸಿದ್ದಾರೆ.
ವಿಷಯ ಪ್ರಸ್ತಾಪಿಸಿದ ಸಂಘದ ಹಿರಿಯ ಸದಸ್ಯ ಹಾಗು ಮಾಜಿ ನಿರ್ದೇಶಕ ಉದಯ ಕಶ್ಯಪ್ ಮಾತನಾಡಿ ಫಸಲ್ ಭೀಮಾ ಯೋಜನೆಯಿಂದ ರೈತರಿಗೆ ಭಾರೀ ಅನುಕೂಲವಾಗುತ್ತಿದೆ. ಒಂದು ಎಕರೆ ಕೃಷಿ ತೋಟ ಬಗ್ಗೆ ವಿಮಾ ಕಂತು ಪಾವತಿಸಿದರೆ ಅದರ ಹವಾಮಾನ ಆದರಿತವಾಗಿ ಹತ್ತು ಆಥವ ಹದಿನೈದು ಪಟ್ಟು ವಿಮಾ ಸೌಲಭ್ಯ ಸಿಗುತ್ತಿತ್ತು. ಕೇಂದ್ರ ಸರಕಾರ ಜಾರಿಗೆ ತಂದಿರುವ ಈ ಯೋಜನೆಗೆ ರಾಜ್ಯ ಸರಕಾರವೂ ಕೈಜೋಡಿಸಿ ಅದರ ಪಾಲಿನ ವಿಮಾ ಕಂತನ್ನು ಪಾವತಿಸಬೇಕು,ಸಂಘದ ಸದಸ್ಯರು ಸಹಕಾರಿ ಸಂಘಗಳ ಮೂಲಕ ತಮ್ಮ ಪಾಲಿನ ವಿಮಾ ಮೊತ್ತವನ್ನು ಪಾವತಿಸಿಬೇಕು, ಇದರಲ್ಲಿ ಕೃಷಿಕರ ಪಾಲು ಸೇರಬೇಕು . ಇದು ಈ ವರೆಗೆ ನಡೆದು ಬಂದ ನಿಯಮ, ಈ ಬಾರಿ ಜೂನ್ 30 ರ ಒಳಗೆ ವಿಮಾ ಕಂತು ಪಾವತಿಸಬೇಕು ಆದರೆ ಈವರೆಗೆ ಸಹಕಾರಿ ಸಂಘಗಳಿಗೆ ಈ ಬಗ್ಗೆ ನೋಟೀಸ್ ಬಂದಿಲ್ಲ. ಒಂದು ಮೂಲದ ಪ್ರಕಾರ ರಾಜ್ಯ ಸರಕಾರ ಈ ಬಾರಿ ಈ ಯೋಜನೆಗೆ ತಮ್ಮ ಪಾಲಿನ ವಿಮಾ ಕಂತು ಪಾವತಿಸುವ ಉತ್ಸಾಹ ತೋರುತ್ತಿಲ್ಲ ಎನ್ನುವ ಮಾಹಿತಿ ಇದೆ. ಒಂದು ವೇಳೆ ರಾಜ್ಯ ಸರಕಾರ ಈ ಯೋಜನೆಯನ್ನು ಕೈಬಿಡುವ ನಿರ್ಧಾರ ಮಾಡಿದ್ದರೆ ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಯಾವುದೇ ಕಾರಣಕ್ಕೂ ಈ ಯೋಜನೆ ನಿಲ್ಲಬಾರದು ರಾಜ್ಯ ಸರಕಾರ ತಕ್ಷಣ ಮುತುವರ್ಜಿವಹಿಸಬೇಕು ಹಾಗು ಆರೋಗ್ಯಕ್ಕೆ ಸಂಬಂಧಿಸಿದ ಯಶಸ್ವಿನಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ವಾಗಬೇಕೆಂದು ಒತ್ತಾಯಿಸಿದರು. ಮಾತ್ರವಲ್ಲ ಮಹಾಸಭೆಯಲ್ಲಿ ಈ ಬಗ್ಗೆ ನಿರ್ಣಯ ಅಂಗೀಕರಿಸಿ ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಬೇಕು ಎಂದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು ರೈತರ ಒಕ್ಕೊರಲ ನಿರ್ಧಾರವನ್ನು ಸರಕಾರಕ್ಕೆ ಕಳುಹಿಸಿಕೊಡುವ ಎಂದರು. ಅಂತೆಯೇ ಮಹಾಸಭೆಯಲ್ಲಿ ನಿರ್ಣಯಿಸಲಾಯಿತು.
ಸಂಘದ ಖಾಲಿ ಹುದ್ದೆಗಳ ಭರ್ತಿಗೆ ಮಹಾ ಸಭೆ ಅನುಮತಿ ನೀಡಬೇಕು ಎಂದು ಅಧ್ಯಕ್ಷರು ಕೇಳಿಕೊಂಡಾಗ ಸಂಘದಲ್ಲಿ ಉದ್ಯೋಗ ನೀಡುವಾಗ ಆರು ಗ್ರಾಮದ ವ್ಯಾಪ್ತಿಗೆ ಹೆಚ್ಚು ಅಧ್ಯತೆ ನೀಡಬೇಕೆಂದು ಸಂಘದ ಸದಸ್ಯೆ ಗಂಗರತ್ನಾ ಹಾಗು ಎಲ್ಲಾ ಧರ್ಮದವರಿಗೆ ಹಾಗೂ ಸಮುದಾಯದವರಿಗೆ ಆದ್ಯತೆ ನೀಡಬೇಕು ಎಂದು ಸದಸ್ಯ ಹನೀಫ್ ಹೇಳಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು.ಮಾವು ಕಾನೂನು ನನ್ನು ಪಾಲನೆ ಮಾಡಿಕೊಂಡು ಉದ್ಯೋಗ ಭರ್ತಿ ಮಾಡುತ್ತೇವೆ. ಮೆರಿಟ್ ಆಧಾರದಲ್ಲಿಯೇ ಅಭ್ಯರ್ಥಿಗಳ ಆಯ್ಕೆ ನಡೆಯುತ್ತವೆ ಎಂದರು.
ಸದಸ್ಯರ ಅಡಕೆ ಫಸಲಿಗೆ ಬ್ರೋಡೋ ದ್ರಾವಣ ಸಿಂಪಡನೆಗೆ ಸಂಘ ಕ್ರಮ ಕೈಗೊಳ್ಳಬೇಕು, ವಿಟ್ಲದ ಪಿಂಗಾರ ತಂಡ ಫೈಬರ್ ದೋಟಿ ಮೂಲಕ ಮದ್ದು ಸಿಂಪಡನೆಗೆ ತಂಡ ಕಟ್ಟಿಕೊಂಡು ರೈತರ ಅಡಕೆ ತೋಟಗಳಿಗೆ ಉಚಿತ ಮದ್ದು ಸಿಂಪಡನೆ ಮಾಡುವ ಹಾಗೆ ನಮ್ಮ ಸಂಘದಿಂದಲೂ ನಡೆಯಬೇಕು ಎಂದು ಸದಸ್ಯರು ಅಗ್ರಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಈ ಚರ್ಚಿಸಿ ಮುಂದಿನ ಕ್ರಮ ಜರಗಿಸಲಾಗುವುದು ಎಂದರು. ಸಂಘದ ರೈತರಿಗೆ ವಿಮೆ ಕಲ್ಪಿಸುವ ಸುವರ್ಣ ಸಹಕಾರ ನಿಧಿಯ ವಿಮಾಕಂತನ್ನು ಸದಸ್ಯರಿಂದ ವಸೂಲು ಮಾಡದೆ ಸಂಘದಿಂದಲೇ ಭರಿಸಬೇಕು ಎಂದು ಸದಸ್ಯರು ಅಗ್ರಹಿಸಿದರು. ಸಂಘದಿಂದ ಪೂರ್ತಿಯಾಗಿ ಪಾವತಿಸಲು ಸಾಧ್ಯವಿಲ್ಲ. ಅರ್ಧದಷ್ಟು ಪಾವತಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಅಧ್ಯಕ್ಷರು ಸಮಜಾಯಿಕೆ ನೀಡಿದರು.
ಸುಸ್ತಿ ಸಾಲ ವಸೂಲಾತಿಯಲ್ಲಿ ಶಿಸ್ತು ಕ್ರಮ ಜರಗಿಸಬೇಕು ಎಂದು ಕೆಲವರು ಅಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಸುಸ್ತಿದಾರರ ಮೇಲೆ ಈ ವರೆಗೆ ನಾವು ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಆದಷ್ಟು ಮನವೊಲಿಸಿ ಮರುಪಾವತಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದರು.
ಸಕ್ರಮ ಪ್ರಾಧಿಕಾರದಿಂದ ಅನುಮೋದನೆಯಾಗಿರುವ ಸಮಗ್ರ ನಿಯಮಾವಳಿಗಳ ಪ್ರಕಾರ ಸಹಕಾರಿ ಸಂಘಗಳನ್ನು ಬಲಗೊಳಿಸಲಾಗುತ್ತದೆ. ಕೇಂದ್ರ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ದೃಷ್ಠಿಯಿಂದ ಸೇವಾ ಸಿಂಧು, ಕರ್ನಾಟಕ ವನ್, ಗ್ರಾಮವನ್ ಮುಂತಾದ ಕೇಂದ್ರಗಳಲ್ಲಿ ಆಗುವ ಎಲ್ಲಾ ಕೆಲಸಗಳು ಇನ್ನು ಮುಂದೆ ಸಹಕಾರಿ ಸಂಘಗಳ ಮೂಲಕ ನಡೆಯಲಿದೆ ಎಂದು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ಸಭೆ ತಿಳಿಸಿದರು. ಸಂಘದ ಸದಸ್ಯರಾದ ದಯಾನಂದ ರೈ ಮನವಳಿಕೆಗುತ್ತು, ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಪ್ರಶಾಂತ ರೈ ಮನವಳಿಕೆ, ಸುಂದರ ಗೌಡ ಕುಂಡಡ್ಕ, ಗಫೂರ್ ಆತೂರು, ಲಕ್ಷಿ೬ನಾರಾಯಣ ರಾವ್ ಆತೂರು, ಗೀತಾ ಸುದೀರ್ , ಜಯಂತಿ ಆರ್ ಗೌಡ, ಹಾಗು ಇನ್ನಿತರ ಸಂಘದ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರ ವಿವಿಧ ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪ್ರಾಪ್ತಿ ವಿ.ಎ ಹಾಗೂ ರಕ್ಷಿತ್ ನಾಯ್ಕ್ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕ ಜಿ.ಪಿ.ಶೇಷಪತಿ ರೈ ಗುತ್ತುಪಾಲು, ಸಂತೋಷ್ ಕುಮಾರ್ ಕೆ.ಅಣ್ಣು ನಾಯ್ಕ, ಅಶಾ ತಿಮ್ಮಪ್ಪ ಗೌಡ, ಮೋನಪ್ಪ ಕುಲಾಲ್ ಬೊಳ್ಳರೋಡಿ,ರಾಮಚಂದ್ರ ಎ. ಸುಧಾಕರ ಪೂಜಾರಿ ಕಲ್ಲೇರಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ,ರವರು ವರದಿ ಮಂಡಿಸಿದರು
ಶಾಖಾ ವ್ಯವಸ್ಥಾಪಕ ಆನಂದ ಗೌಡ, ಆಶಾಲತಾ,ರಾಧಾಕೃಷ್ಣ ನಾಯ್ಕ್, ಲೆಕ್ಕಿಗ ಮನೋಹರ್ ಪ್ರಕಾಶ್,ಸಹಾಯಕ ಲೆಕ್ಕಿಗ ರವಿರಾಜ್ ರೈ, ವಿವಿಧ ವಿಚಾರಗಳನ್ನು ಸಭೆಗೆ ಮಂಡಿಸಿದರು.ಸಂಘದ ನಿರ್ದೇಶಕಿ ನಳಿನಿ., ಪ್ರಾರ್ಥಿಸಿ, ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ವಂದಿಸಿ, ಲೋಕನಾಥ ರೈ ಕೇಲ್ಕ ಕಾರ್ಯಕ್ರಮ ನಿರೂಪಿಸಿದರು.
ಸಿಬ್ಬಂದಿಗಳಾದ ಪ್ರಜ್ಞಾ, ಮಂಗಳಾ ಪೈ, ಮಹೇಶ ಕೆ, ಸಂತೋಷ್ ಬಿ, ಯಶಸ್ವಿ ಕೆ, ಕೃಷ್ಣಪ್ಪ ಎ, ಅಶ್ವಥ್ ಎಸ್, ಕವನ್ಕುಮಾರ್,ಸತೀಶ,ಚಂದ್ರಹಾಸ್, ರವಿಕಿರಣ, ಕುಕ್ಕ, ಆನಂದ, ಬಾಲಕೃಷ್ಣ, ಪ್ರಸಾದ್, ಸತೀಶ , ಸೀತಾರಾಮ, ಕೇಶವ ಗೌಡ, ಸುಂದರ, ವಸಂತ ಶೆಟ್ಟಿ, ಮೋಹನ ಗೌಡ ಸಹಕರಿಸಿದರು.