ಪುಣ್ಚತ್ತಾರು ಬೀರ್ನೇಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಸಮಿತಿ ರಚನೆ

0

ಕಾಣಿಯೂರು: ಪುಣ್ಚತ್ತಾರು ಬೀರ್ನೇಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಸಮಿತಿ ರಚನೆಯು ಶ್ರೀ ಕ್ಷೇತ್ರದ ಮೊಕ್ತೇಸರರಾದ ಕೃಷ್ಣಪ್ಪ ಗೌಡ ಬೀರ್ನೇಲು, ವಸಂತ ಗೌಡ ಬೀರ್ನೇಲು, ಪುರುಷೋತ್ತಮ ಗೌಡ ಬೀರ್ನೇಲು, ಕುಸುಮಾಧರ ಗೌಡ ಬೀರ್ನೇಲು, ಕ್ಷೇತ್ರದ ಪ್ರಧಾನ ಅರ್ಚಕ ಚಿದಾನಂದ ಉಪಾಧ್ಯಾಯ ಅವರ ಉಪಸ್ಥಿತಿಯಲ್ಲಿ ನಡೆಯಿತು.


ಗೌರವಾಧ್ಯಕ್ಷರಾಗಿ ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಾಣಿಯೂರು ಶ್ರೀ ರಾಮ ತೀರ್ಥ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಅಧ್ಯಕ್ಷರಾಗಿ ಪ್ರಶಾಂತ್ ‘ಆದಿ’ ಮುರುಳ್ಯ, ಉಪಾಧ್ಯಕ್ಷರಾಗಿ ದಿನೇಶ್ ಪೈಕ, ದಿನೇಶ್ ಮಾಳ, ಕಾರ್ಯದರ್ಶಿಯಾಗಿ ಹರೀಶ್ ಪೈಕ ಕಾಯರ್ತಡಿ, ಜತೆ ಕಾರ್ಯದರ್ಶಿಯಾಗಿ ಹರೀಶ್ ಬಿರ್ನೆಲು, ಕೋಶಾಽಕಾರಿಯಾಗಿ ಲಕ್ಷ್ಮಣ ಗೌಡ ಪುಣ್ಚತ್ತಾರುರವರನ್ನು ಆಯ್ಕೆ ಮಾಡಲಾಗಿದೆ. ಗೌರವ ಸಲಹೆಗಾರರಾಗಿ ಪದ್ಮಯ್ಯ ಗೌಡ ಅನಿಲ, ಹರಿಯಪ್ಪ ಗೌಡ ನಾವೂರು, ಪುಟ್ಟಣ್ಣ ಗೌಡ ಪೈಕ, ದೇವಿಪ್ರಸಾದ್ ಕಾನತ್ತೂರ್, ಶೇಷಪ್ಪ ಗೌಡ ಬೆದ್ರಂಗಳ, ಪ್ರದೀಪ್ ಬೊಬ್ಬೆಕೇರಿ, ರಾಮಚಂದ್ರ ಮಾಸ್ತರ್ ಪೆರಿಂಜ,ಗಣೇಶ್ ಭಟ್ ಕಾರಡ್ಕ, ಮೋನಪ್ಪ ಬಂಡಾಜೆ, ನಾಗೇಶ್ ರೈ ಮಾಳ, ವಿವೇಕ್ ನಿಡ್ಡಾಜೆ, ಜಯಪ್ರಸಾದ್ ಕುಂಡುಳಿ, ಸದಾನಂದ ರೈ ಮಾಲೆಂಗ್ರಿ, ವಿಶ್ವನಾಥ ರೈ ಮಾಳ, ಸಂಜೀವ ರೈ ಪೈಕ, ಭಾಸ್ಕರ ಗೌಡ ಮುರುಳ್ಯ, ಶಿವಕುಮಾರ್ ಕಡೀರರವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here